ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಮನೆ, 8 ನಿವೇಶನ ಹೊಂದಿರುವ ಅಧಿಕಾರಿ: ಆಸ್ತಿ ವಿವರ ಬಹಿರಂಗಪಡಿಸಿದ ಎಸಿಬಿ

Last Updated 28 ಆಗಸ್ಟ್ 2020, 21:48 IST
ಅಕ್ಷರ ಗಾತ್ರ

ಬೆಂಗಳೂರು:ಕೊಳಚೆ ನಿರ್ಮೂಲನಾ ಮಂಡಳಿ ಕಾರ್ಯದರ್ಶಿ ಎಂ.ಎಸ್. ನಿರಂಜನಬಾಬು ಅವರು 5 ಮನೆ, 8 ನಿವೇಶನಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ತುಮಕೂರು ಜಿಲ್ಲೆಯ ವಿವಿಧೆಡೆ 5 ಮನೆ ಹೊಂದಿದ್ದಾರೆ, ಅದೇ ಜಿಲ್ಲೆಯಲ್ಲಿ 8 ನಿವೇಶನಗಳಿವೆ. ಒಂದೂವರೆ ಕೆ.ಜಿ ಚಿನ್ನಾಭರಣ, ಮೂರುವರೆ ಕೆ.ಜಿ ಬೆಳ್ಳಿ, 2 ಕಾರು, 1 ದ್ವಿಚಕ್ರ ವಾಹನ, ₹5 ಲಕ್ಷ ನಗದು, ₹20 ಲಕ್ಷ ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ₹54 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ’ ಎಂದು ವಿವರಿಸಿದ್ದಾರೆ.

‘ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ (ವಲಯ–6) ಎಚ್‌. ನಾಗರಾಜ್ ಅವರು ಮೈಸೂರಿನಲ್ಲಿ 2 ಮನೆ, 5 ಅಂತಸ್ತಿನ ಒಂದು ವಾಣಿಜ್ಯ ಕಟ್ಟಡ, 4 ನಿವೇಶನ, ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಒಂದು ಫ್ಲಾಟ್, 1 ನಿವೇಶನ, 2 ಕೆ.ಜಿ ಚಿನ್ನ, 11 ಕೆ.ಜಿ 500 ಗ್ರಾಂ ಬೆಳ್ಳಿ, 2 ಕಾರು, ₹9 ಲಕ್ಷ ನಗದು, ₹22 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಇಬ್ಬರು ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಅವರಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT