ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

7

ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

Published:
Updated:

ಬೆಂಗಳೂರು: ಊಟದ ಬಳಿಕ ಪಾತ್ರೆ ತೊಳೆದ ನೀರನ್ನು ಹೊರಗೆ ಹಾಕುವಾಗ ಆಯತಪ್ಪಿ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯರಾತ್ರಿ ಹುಳಿಮಾವು ಪೊಲೀಸ್ ಠಾಣೆಯ ವ್ಯಾಪ್ತಿಯ ಜ್ಞಾನಪ್ಪನಹಳ್ಳಿಯಲ್ಲಿ ನಡೆದಿದೆ.

‘ತಮಿಳುನಾಡಿನ ಹೊಸೂರಿನವರಾದ ರಘುರಾಮ್ (34) ಮೃತರು. ಮೂರು ವರ್ಷಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ವಿವಾಹವಾಗಿದ್ದರು. ಪತ್ನಿಯೊಂದಿಗೆ ಅವನಿ ಶೃಂಗೇರಿನಗರದ ಮನೆಯೊಂದರಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಊಟ ಮುಗಿಸಿದ ನಂತರ ಕುಕ್ಕರ್‌ನಲ್ಲಿ ಕೈ ಮತ್ತು ತಟ್ಟೆ ತೊಳೆದಿದ್ದರು. ಅದರಲ್ಲಿ ತುಂಬಿದ್ದ ನೀರನ್ನು ಹೊರಗೆ ಚೆಲ್ಲುವಾಗ ಕೈಯಿಂದ ಕುಕ್ಕರ್‌ ಜಾರಿದೆ. ಅದನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ಮುಗ್ಗರಿಸಿ ಬಿದ್ದಿದ್ದಾರೆ. ಅವರ ಮನೆಯ ಹೊರ ಆವರಣದ ತಡೆಗೋಡೆ 3.5 ಅಡಿ ಎತ್ತರವಿದೆ’ ಎಂದು ಹೇಳಿದರು.

‘ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಪತ್ನಿ ಗರ್ಭಿಣಿ ಆಗಿರುವ ಕಾರಣ ರಘು ಮನೆಯ ಕೆಲಸಗಳನ್ನು ಮಾಡುತ್ತಿದ್ದರು’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !