ಬೆಂಗಳೂರು: ದೇಶದ ಅತ್ಯಂತ ವಾಸಯೋಗ್ಯ ನಗರವಾಗಿ ಹೈದರಾಬಾದ್ ಹೊರಹೊಮ್ಮಿದ್ದು, ಬೆಂಗಳೂರು ನಗರವನ್ನು ಹಿಂದಿಕ್ಕಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ಎರಡೂ ನಗರಗಳು ಅತಿ ವೇಗವಾಗಿ ಬೆಳೆಯುತ್ತಿವೆ.

ಸುಮಾರು 15 ಅಂಶಗಳ ಪ್ರಶ್ನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಮೂಲದ ಅನ್ಬಾಕ್ಸಿಂಗ್ ಬಿಎಲ್ಆರ್ ಸಂಸ್ಥೆ ನಡೆಸಿರುವ ಸಮೀಕ್ಷೆ– ‘ವಿ.ಆರ್.ಸಿಟಿ 2026’ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಉದ್ಯೋಗ, ಬೆಳವಣಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳೊಂದಿಗೆ ದೇಶದ ಭವಿಷ್ಯದ ನಗರಗಳಾಗಿ ರೂಪುಗೊಂಡಿರುವ ಎರಡೂ ನಗರಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.

159 ಪುಟಗಳ ಈ ವರದಿಯಲ್ಲಿ ವಾಸಕ್ಕೆ ಯೋಗ್ಯವಾದ 8 ನಗರಗಳ ಮಾಹಿತಿ ಇದೆ. ಇದರಲ್ಲಿ ಸಂಪರ್ಕ, ವೈವಿಧ್ಯ, ಪ್ರವಾಸ, ವಸತಿ, ಮೂಲಸೌಕರ್ಯ ಹಾಗೂ ಹವಾಮಾನ ಆಧರಿಸಿ ಮಾಹಿತಿ ಸಂಗ್ರಹಿಸಲಾಗಿದೆ.

ಈ ಪಟ್ಟಿಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ಮತ್ತು ಕೋಲ್ಕತ್ತ ನಗರಗಳು ಇವೆ. ಗುಜರಾತ್ನ ಅಹಮದಾಬಾದ್ ಈ ಪಟ್ಟಿಯ ಕೊನೆ ಸ್ಥಾನದಲ್ಲಿದೆ. ಉಳಿದಂತೆ ಚೆನ್ನೈ, ದೆಹಲಿ ಎನ್ಸಿಆರ್, ಪುಣೆ, ಗ್ರೇಟರ್ ಮುಂಬೈ ಕ್ರಮವಾಗಿ ನಾಲ್ಕು, ಐದು, ಆರು ಮತ್ತು ಏಳನೇ ಸ್ಥಾನದಲ್ಲಿವೆ.

ಬೆಂಗಳೂರು ಹವಾಗುಣ, ವೈವಿಧ್ಯದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಹೈದರಾಬಾದ್ ಸಹ ಈ ಎಲ್ಲಾ ವಿಷಯಗಳಲ್ಲಿ ಸಮಾನ ಪೈಪೋಟಿ ನೀಡಿದೆ. ಜತೆಗೆ ಇಲ್ಲಿನ ವಾಹನ ದಟ್ಟಣೆ ಬೆಂಗಳೂರಿನಷ್ಟೇ ಇದೆ.

ಎರಡೂ ನಗರಗಳಲ್ಲಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಸಾಗಲು ಸಾಮಾನ್ಯವಾಗಿ 22 ಕಿ.ಮೀ. ಕ್ರಮಿಸಲು ಸರಾಸರಿ ಅವಧಿ 58ರಿಂದ 59 ನಿಮಿಷ ಬೇಕು.

ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಕಚೇರಿ ಸ್ಥಳಾವಕಾಶದ ವಿಷಯದಲ್ಲಿ ಈ ಎರಡೂ ನಗರಗಳು ಶೇಕಡ 53ರಷ್ಟು ಪಾಲು ಹೊಂದಿವೆ. ದಿಲ್ಲಿ–ಎನ್ಸಿಆರ್ ಮತ್ತು ಗ್ರೇಟರ್ ಮುಂಬೈಗಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಾದರೂ ತಮ್ಮ ಸಾಮರ್ಥ್ಯ ಮೀರಿ ಸಾಧನೆ ಮಾಡುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ದೇಶದ ಅಗ್ರ 8 ನಗರಗಳ ನಡುವೆ ಹೊಸ ದೇಶಿಯ ವಿಮಾನ ಸಂಚಾರದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಶೇಕಡ 50ರಷ್ಟು ಕೊಡುಗೆ ನೀಡಿವೆ.

ಎರಡೂ ನಗರಗಳು ತಂತ್ರಜ್ಞಾನ ಆಧರಿತ ಬೆಳವಣಿಗೆ ಸಾಧಿಸಿವೆ. ಆದರೆ, ಕಾರ್ಯನಿರ್ವಹಣಾ ರೀತಿ, ಬೆಳವಣಿಗೆಗಳಲ್ಲಿ ತುಂಬ ಅಂತರಗಳಿವೆ. ನವೋದ್ಯಮ, ಹಣಕಾಸು ನೆರವು, ನಾವೀನ್ಯ ಮತ್ತು ಹೊಸ ಉದ್ಯೋಗಳ ಸೃಷ್ಟಿಯಲ್ಲಿ ಬೆಂಗಳೂರು ಮುನ್ನಡೆ ಸಾಧಿಸಿದ್ದು, ದೇಶದ ನವೋದ್ಯಮ ರಾಜಧಾನಿಯಾಗಿದೆ.

ಇಲ್ಲಿ ಬ್ಯಾಂಕ್ ಠೇವಣಿ ಪ್ರಮಾಣ ಹೆಚ್ಚಿದೆ. ಹೈದರಾಬಾದ್ ಜಾಗತಿಕ ಸಾಮರ್ಥ್ಯ ಕೇಂದ್ರದ ಹಬ್ ಆಗಿ ಹೊರಹೊಮ್ಮುತ್ತಿದೆ. ಟೆಕ್ ಜಾಬ್ಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವಣ ಅಂತರ ಕಡಿಮೆಯಾಗುತ್ತಿದೆ.

ಗ್ರಾಹಕರು ಮತ್ತು ಸಣ್ಣ ಉದ್ಯಮಿಗಳಿಗೆ ನೇರವಾಗಿ ನೀಡುವ ಸಾಲ, ಗೃಹ ಸಾಲದಲ್ಲಿ ಹೈದರಾಬಾದ್ ಮುಂದಿದೆ. ಮೂಲಸೌಕರ್ಯ ಅಭಿವೃದ್ಧಿ, ಮಹಿಳೆಯರ ಸುರಕ್ಷತೆಯಲ್ಲಿ ಹೈದರಾಬಾದ್ ಮುಂದಿದೆ. ಐಟಿ, ತಯಾರಿಕಾ ವಲಯ, ಔಷಧ ಮತ್ತು ಬಿಎಫ್ಎಸ್ಐ ವಲಯಗಳಲ್ಲಿ ಉದ್ಯೋಗಿಗಳ ನೇಮಕದಲ್ಲಿ ಎರಡೂ ನಗರಗಳು ಪ್ರಾಬಲ್ಯ ಸಾಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.