ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ತರಗತಿ ಬಾಲಕ ಐಜಿಸಿಎಸ್‌ಇ ಪರೀಕ್ಷೆ ತೇರ್ಗಡೆ

Last Updated 13 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರನಗರದ ಟ್ರಯೊ ವರ್ಲ್ಡ್‌ ಅಕಾಡೆಮಿಯ 4ನೇ ತರಗತಿ ವಿದ್ಯಾರ್ಥಿ ಆರವ್‌ ನಲ್ಲೂರ್‌ (9 ವರ್ಷ) ಕೇಂಬ್ರಿಜ್‌ ಇಂಟರ್‌ನ್ಯಾಷನಲ್‌ ನಡೆಸುವ 10ನೇ ತರಗತಿಯ ಇಂಟರ್‌ನ್ಯಾಷನಲ್‌ ಜನರಲ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಐಜಿಸಿಎಸ್‌ಇ) ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಗಣಿತದಲ್ಲಿ ‘ಎ’ ಗ್ರೇಡ್‌ ಪಡೆದುಕೊಂಡಿದ್ದಾನೆ.

ಮೇ ತಿಂಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಬಾಲಕನ ವಿಶೇಷ ಬುದ್ಧಿಮತ್ತೆಯನ್ನು ಗಮನಿಸಿದ ಆತನ ತಾಯಿ ದಿವ್ಯಾ ನಲ್ಲೂರ್‌ ಮತ್ತು ತಂದೆ ಗಣೇಶ್‌ ನಲ್ಲೂರ್‌ ಶಿವು ಅವರು ಶಾಲೆಯ ಅಧ್ಯಾಪಕರಿಗೆ ಮಾಹಿತಿ ನೀಡಿದ ಮೇರೆಗೆ ಬಾಲಕನನ್ನು ಐಜಿಸಿಎಸ್‌ಇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆರವ್‌ ಇದೀಗ ಮೆನ್ಸಾ ಐಕ್ಯೂ ಪರೀಕ್ಷೆ ಎದುರಿಸುವುದಕ್ಕೆ ಅರ್ಹತೆ ಗಳಿಸಿದ್ದಾನೆ.

‘ಇಷ್ಟು ಎಳೆಯಪ್ರಾಯದಲ್ಲಿ ಇಂತಹ ಬುದ್ಧಿಮತ್ತೆ ಪ್ರದರ್ಶನಅಪರೂಪ. ಬಾಲಕ ಇತರ ವಿದ್ಯಾರ್ಥಿಗಳಿಗೂ ಇದೀಗ ಪ್ರೇರಣೆಯಾಗಿದ್ದಾನೆ’ ಎಂದು ಟ್ರಯೊ ವರ್ಲ್ಡ್‌ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ನವೀನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT