ಸೋಮವಾರ, ಏಪ್ರಿಲ್ 6, 2020
19 °C

ಐಐಎಸ್‌ಸಿಗೆ ಮುಕ್ತ ‍ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ತನ್ನ ಆವರಣದಲ್ಲಿ ಶನಿವಾರ (ಫೆ.29) ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ‘ಮುಕ್ತ ದಿನ’ (ಓಪನ್‌ ಡೇ) ಆಯೋಜಿಸಿದೆ.

ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ರಾಹುಲ್ ಪಂಡಿತ್ ಮಾತನಾಡಿ, ‘40ಕ್ಕೂ ಹೆಚ್ಚಿನ ವಿಭಾಗಗಳ ವಿದ್ಯಾರ್ಥಿಗಳು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚಿನ ಸಂಶೋಧನೆಗಳು ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ವಿಚಾರಸಂಕಿರಣಗಳು, ಉಪನ್ಯಾಸ, ಕಾರ್ಯಾಗಾರ, ಭಿತ್ತಿಚಿತ್ರ ಪ್ರದರ್ಶನ, ಕಿಡ್ಸ್ ಝೋನ್‌ ಮುಕ್ತ ದಿನದ ಪ್ರಮುಖ ಭಾಗಗಳಾಗಿವೆ. ವಿದ್ಯಾರ್ಥಿಗಳು, ವಿಜ್ಞಾನಿಗಳು, ಪ್ರಾಧ್ಯಾಪಕರು ಹಾಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಸಂಸ್ಥೆಯ ಆವರಣದಲ್ಲಿರುವ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಳ್ಳಲು ಇದು ಉತ್ತಮ ಅವಕಾಶ’ ಎಂದು ತಿಳಿಸಿದರು. 

‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಆವಿಷ್ಕಾರಗಳ ಬಗ್ಗೆಯೂ ಮಾಹಿತಿ ದೊರೆಯಲಿವೆ. ಕಿಡ್ಸ್‌ ಝೋನ್‌ನಲ್ಲಿ ಶಾಲಾ ಹಂತದ ವಿವಿಧ ಪ್ರಯೋಗಗಳು, ವಿಜ್ಞಾನ ಮಾದರಿಗಳು ಹಾಗೂ ವಿಡಿಯೋಗಳನ್ನು ಪ್ರದರ್ಶಿಸಲಾಗುತ್ತದೆ. ಆವರಣದ ಒಳಗೆ ಸಂದರ್ಶಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಇ- ರಿಕ್ಷಾಗಳನ್ನು ಬಳಸಬಹುದು. ಈ ಸೇವೆಗಾಗಿ 15 ಇ-ರಿಕ್ಷಾ ಒದಗಿಸಲಾಗಿದೆ. ಇ-ರಿಕ್ಷಾ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ’ ಎಂದು ಮಾಹಿತಿ ನೀಡಿದರು. 

‘ಆವರಣದೊಳಗೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಮುಂಭಾಗವಿರುವ ಮೈದಾನ ಹಾಗೂ ಜಿಮ್ಖಾನಾ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಗಳನ್ನೇ ಬಳಸುವುದು ಉತ್ತಮ’ ಎಂದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)