ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಚಟುವಟಿಕೆ ಅಡ್ಡೆಗಳ ಮೇಲೆ ದಾಳಿ

ಲಾಕ್‌ಡೌನ್‌ ಅವಧಿಯಲ್ಲಿ ಸಿಸಿಬಿಯಿಂದ 167 ಆರೋಪಿಗಳ ಬಂಧನ * ₹26.34 ಲಕ್ಷ ಜಪ್ತಿ
Last Updated 3 ಜುಲೈ 2021, 18:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಾಗಿದ್ದ ಅವಧಿಯಲ್ಲಿ ನಗರದಾದ್ಯಂತ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್ ಹಾಗೂ ಮಟ್ಕಾ ಅಡ್ಡೆಗಳ ಮೇಲೆ ದಾಳಿ ಸಂಘಟಿಸಿದ್ದ ಸಿಸಿಬಿ ಪೊಲೀಸರು ಒಟ್ಟು 167 ಆರೋಪಿಗಳನ್ನು ಬಂಧಿಸಿ, ₹ 26.34 ಲಕ್ಷ ಜಪ್ತಿ ಮಾಡಿದ್ದಾರೆ.

ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಒಂದು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಾಗಿತ್ತು. ಬ್ಯಾಟರಾಯನಪುರ ಠಾಣೆಯಲ್ಲಿ ಎರಡು ಜೂಜಾಟ ಪ್ರಕರಣ ಹಾಗೂ ಚಾಮರಾಜಪೇಟೆ, ಕೆ.ಜಿ.ಹಳ್ಳಿ, ಹಲಸೂರು ಗೇಟ್, ಉಪ್ಪಾರಪೇಟೆ, ಬಾಣಸವಾಡಿ, ರಾಜಗೋಪಾಲನಗರ, ಯಲಹಂಕ ನ್ಯೂ ಟೌನ್, ವಿಲ್ಸನ್‌ ಗಾರ್ಡನ್, ಚಿಕ್ಕಜಾಲ, ಕೆಂಗೇರಿ, ಮಹಾಲಕ್ಷ್ಮೀ ಬಡಾವಣೆ, ಕಮರ್ಷಿಯಲ್ ಸ್ಟ್ರೀಟ್, ಸದಾಶಿವನಗರ, ಕಲಾಸಿಪಾಳ್ಯ ಠಾಣೆಗಳಲ್ಲಿ ತಲಾ ಒಂದು ಜೂಜಾಟ ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿದ್ದವು.

ವೇಶ್ಯಾವಾಟಿಕೆ ಸ್ಥಳದ ಮೇಲೂ ದಾಳಿ: ಬಾಣಸವಾಡಿ, ಮಾರತ್ತಹಳ್ಳಿ, ಇಂದಿರಾನಗರ, ಚಂದ್ರಾ ಬಡಾವಣೆ, ಪುಟ್ಟೇನಹಳ್ಳಿ, ಕೋರಮಂಗಲ, ಮಲ್ಲೇಶ್ವರ, ಬಸವನಗುಡಿ, ಸುದ್ದಗುಂಟೆಪಾಳ್ಯ, ಹುಳಿಮಾವು ಠಾಣಾ ವ್ಯಾಪ್ತಿಗಳಲ್ಲಿ ಸ್ಪಾ, ಮಸಾಜ್‌ ಪಾರ್ಲರ್, ಮನೆ, ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ, 51 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿ ವೇಳೆ ₹ 1.41 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT