ಬೆಂಗಳೂರು: ‘ಗುರು ಹಿರಿಯರಿಗೆ ಗೌರವ ನೀಡಿ ವಿನಯವಂತಿಕೆಯನ್ನು ಬದುಕಿನಲ್ಲು ರೂಢಿಸಿಕೊಂಡ ವ್ಯಕ್ತಿ ಜೀವನದಲ್ಲಿ ಉನ್ನತ ಗೌರವ ಪಡೆದು ಎತ್ತರಕ್ಕೆ ಬೆಳೆಯುತ್ತಾನೆ’ ಎಂದು ಸಂಗೀತ ವಿದುಷಿ ಟಿ.ಎಸ್. ಸತ್ಯವತಿ ಹೇಳಿದರು.

ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಾದವೈಭವ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಶ್ರೀ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನೆ ಸಂದರ್ಭ ಸ್ಮೃತಿ ಚಂದ್ರಿಕಾ ಫೌಂಡೇಷನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಜೀವನದಲ್ಲಿ ಮನುಷ್ಯತ್ವ, ಹಿರಿಯರೊಂದಿಗೆ ಸತ್ಸಂಗ ಮತ್ತು ಮೋಕ್ಷ ಪ್ರಾಪ್ತವಾಗುವುದು ಬಹಳ ಕಷ್ಟ. ವಿವಿಧ ಕಲೆಗಳಲ್ಲಿ ಸಂಗೀತವು ಮೋಕ್ಷ ಸಾಧನೆಗೆ ಪೂರಕ ಎನ್ನುತ್ತಾರೆ. ಆದರೆ ಸತ್ಸಂಗ ಇದ್ದರೆ ಮಾತ್ರ ಅದು ಸುಲಭವಾಗುತ್ತದೆ‘ ಎಂದು ತಿಳಿಸಿದರು.

ವಿದುಷಿ ಮೈಸೂರು ನಾಗಮಣಿ ಶ್ರೀನಾಥ್ ಮಾತನಾಡಿ, ‘ನಾನು ಹಲವರಿಗೆ ಪಾಠ ಮಾಡಿ ಅವರಿಂದಲೇ ಅನೇಕ ಗುಣ, ಹೊಸತನ ಕಲಿತಿದ್ದೇನೆ. ಚಂದ್ರಿಕಾ ಹೆಸರಿನಲ್ಲಿ ಕುಟುಂಬದವರು ಫೌಂಡೇಷನ್ ಆರಂಭಮಾಡಿರುವುದು ಮಾದರಿ ಕಾರ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಇವೆಲ್ಲವೂ ಉತ್ತಮ ಕೊಡುಗೆ’ ಎಂದರು.

ವಿದ್ವಾಂಸರಾದ ಜಿ.ಎನ್.ನಾಗಮಣಿ ಶ್ರೀನಾಥ್, ಲಾಲ್ಗುಡಿ ರಾಜಲಕ್ಷ್ಮಿ ಟಿ.ಟಿ. ಶ್ರೀನಿವಾಸನ್, ಗೀತಾ ರಮಾನಂದ್, ವಸಂತಮಾಧವಿ, ಪುಸ್ತಕಂ ರಮಾ, ಬಿ.ಕೆ. ಅನಂತರಾಮ್, ರವಿಶಂಕರ್ ಶರ್ಮ ಅವರಿಗೆ ಸ್ಮೃತಿ ಚಂದ್ರಿಕಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಗೀತ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮ, ಸಂಸ್ಥೆ ಸಂಚಾಲಕರಾದ ಉಮೇಶ್ ಡಿ.ಎಸ್ ಮತ್ತು ಸಿ.ಆರ್ ರವಿಶಂಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.