ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರ ಜತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಆಟೊ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಮೂಲದ ಆಟೊ ಚಾಲಕ ಸುನಿಲ್ ಬಂಧಿತ ಆರೋಪಿ. ಒಂದೂವರೆ ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ, ಆಟೊ ಚಾಲನೆ ವೃತ್ತಿ ಮಾಡುತ್ತಿದ್ದ.

ಥಣಿಸಂದ್ರದ ನಿವಾಸಿಯಾಗಿದ್ದ ಮಹಿಳೆ, ಗುರುವಾರ ರಾತ್ರಿ ಕೆಲಸದ ನಿಮಿತ್ತ ಮನೆಯಿಂದ ಹೊರಕ್ಕೆ ಹೋಗಿದ್ದರು. ವಾಪಸ್ ತೆರಳಲು ಹೊರಮಾವಿನಿಂದ ಥಣಿಸಂದ್ರಕ್ಕೆ ‘ನಮ್ಮ ಯಾತ್ರಿ’ ಆ್ಯಪ್ನಲ್ಲಿ ಆಟೊ ಬುಕ್ ಮಾಡಿದ್ದರು. ರಾತ್ರಿ 8.55ರ ಸುಮಾರಿಗೆ ಪಿಕಪ್ ಲೊಕೇಷನ್ಗೆ ಆಟೊ ಬಂದಿತ್ತು. ಆಟೊ ಚಾಲಕನು ಮಹಿಳೆಯನ್ನು ಥಣಿಸಂದ್ರ ಮಾರ್ಗಕ್ಕೆ ಕರೆದೊಯ್ಯದೇ ಬೇರೊಂದು ಮಾರ್ಗದಲ್ಲಿ ಕರೆದೊಯ್ಯುತ್ತಿದ್ದ. ಇದರಿಂದ ಗಾಬರಿಗೊಂಡಿದ್ದ ಮಹಿಳೆ ಕಿರುಚಿಕೊಂಡು ಆಟೊದಿಂದ ಜಿಗಿದು ಪಾರಾಗಿದ್ದರು. ಮಹಿಳೆಯ ಪತಿ ಅಜರ್ ಖಾನ್ ಅವರು ‘ಎಕ್ಸ್’ ಖಾತೆಯಲ್ಲಿ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ ಅದನ್ನು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಅಮೃತಹಳ್ಳಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು.

‘ಆಟೊ ಚಾಲಕ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ. ಕೆಲವು ಸ್ಥಳಗಳ ವಿಳಾಸ ಹಾಗೂ ಬಡಾವಣೆಗಳು ಆತನಿಗೆ ಗೊತ್ತಿರಲಿಲ್ಲ. ಗೂಗಲ್ ಮ್ಯಾಪ್ ಪರಿಶೀಲನೆ ನಡೆಸಿದಾಗ ಆಟೊ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಾಗಿರುವುದು ಪತ್ತೆಯಾಗಿದೆ. ಮಹಿಳೆ ನೀಡಿದ್ದ ವಿಳಾಸದಂತೆ ಸಾಗದೇ ಬೇರೊಂದು ಮಾರ್ಗದಲ್ಲಿ ತೆರಳಿದ್ದ ಕಾರಣಕ್ಕೆ ಆಕೆ ಭಯಗೊಂಡು ಆಟೊ ನಿಲ್ಲಿಸುವಂತೆ ಹೇಳಿದ್ದರು. ಮೇಲ್ಸೇತುವೆಯಿಂದ ಕೆಳಕ್ಕೆ ಇಳಿದ ಮೇಲೆ ಮಹಿಳೆ ಆಟೊದಿಂದ ಕೆಳಕ್ಕೆ ಇಳಿದು, ಹಣ ಪಾವತಿಸಿ ಹೋಗಿದ್ದಾರೆ. ಬಳಿಕ ಪತಿಗೆ ಕರೆ ಮಾಡಿ ಬೇರೊಂದು ಆಟೊ ಪಡೆದು ಮನೆಗೆ ಹೋಗಿದ್ದರು. ಸದ್ಯ ಮಹಿಳೆಯ ಪತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.