ಭಾನುವಾರ, ಫೆಬ್ರವರಿ 28, 2021
21 °C

ಸ್ಮಿತಾಗೆ ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲಿಕ್ಸಿರ್ ಪ್ರೊಡಕ್ಷನ್ ಹೌಸ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ಮಿಸ್, ಮಿಸ್ಟರ್ ಮತ್ತು ಮಿಸೆಸ್ ಎಲಿಕ್ಸಿರ್ ಇಂಡಿಯಾ ಸೂಪರ್ ಮಾಡೆಲ್ ಹಂಟ್’ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜೆ.ಪಿ.ನಗರದ ಸ್ಮಿತಾ ರಾಜು ಜಿ. (36) ಅವರು ‘ಮಿಸೆಸ್ ಬ್ಯೂಟಿಫುಲ್ ಸ್ಮೈಲ್‌’ ಕಿರೀಟ ಮುಡಿಗೇರಿಸಿಕೊಂಡರು.

‘ಈ ಸ್ಪರ್ಧೆಯ ಮೂಲಕ ವಿಚ್ಛೇದಿತ ಮಹಿಳೆಯರು ಹಾಗೂ ಒಂಟಿ ತಾಯಂದಿರ ಪ್ರತಿಭೆ ಹೊರಹೊಮ್ಮಲು ಸಂಸ್ಥೆಯು ವಿಶೇಷ ವೇದಿಕೆ ಕಲ್ಪಿಸಿತ್ತು. ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸ್ಮಿತಾ ಸಂತಸ ಹಂಚಿಕೊಂಡರು.

ಇದೇ ಸ್ಪರ್ಧೆಯ ‘ಮಿಸೆಸ್ ಟ್ಯಾಲೆಂಟ್’ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರುತಿ ಪ್ರಶಸ್ತಿ ಪಡೆದುಕೊಂಡರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು