ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿಗರು’

Last Updated 19 ಜುಲೈ 2019, 19:34 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ:‘ವಿದೇಶಿಗರು ಭಾರತ ಸಂಸ್ಕೃತಿಗೆ ಮಾರುಹೋಗಿದ್ದು, ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆ, ಧ್ಯಾನ, ಪ್ರಾಣಾಯಾಮ, ಯೋಗಗಳಿಗೆ ಭಾರತವನ್ನು ಆದರ್ಶವಾಗಿಟ್ಟುಕೊಂಡಿ ದ್ದಾರೆ’ ಎಂದು ಧಾರ್ಮಿಕ ಚಿಂತಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು.

ಹೇರೋಹಳ್ಳಿ ಸಮೀಪದ ಸಿಂಡಿ ಕೇಟ್ ಬ್ಯಾಂಕ್ ಕಾಲೊನಿಯ ಓಂ ಸೇವಾ ಕೇಂದ್ರದಲ್ಲಿ ಯೋಗ ಗುರು ಡಾ.ಸಿ.ಎನ್.ಕೃಷ್ಣ ಅವರಿಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೇದವ್ಯಾಸರು ಜಗತ್ತಿಗೆ ಜ್ಞಾನ ಕೊಟ್ಟವರು. ನಮ್ಮೆಲ್ಲರಿಗೂ ಸುಜ್ಞಾನವನ್ನು ಧಾರೆ ಎರೆ ದಿದ್ದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ ಜೀವಿಸುತ್ತಿದ್ದೇವೆ’ ಎಂದರು.

ಯೋಗ ಗುರು ಡಾ.ಸಿ.ಎನ್.ಕೃಷ್ಣ, ‘ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಜನರಿಗೆ ಕೈಲಾದ ಸಹಾಯಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು. ವೃತ್ತ ಮುಖ್ಯಶಿಕ್ಷಕ ರಾಜ್‍ಗೋಪಾಲ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT