‘ಭಾರತದ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ’

7

‘ಭಾರತದ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ’

Published:
Updated:
Deccan Herald

ಬೆಂಗಳೂರು: ‘ಭಾರತ ಎಂದರೆ ಭೌಗೋಳಿಕ ಪ್ರದೇಶ ಅಲ್ಲ, ಇಲ್ಲಿನ ಸಂಸ್ಕೃತಿ ಹಾಗೂ ಆಚಾರ ವಿಚಾರಗಳು ಜಗತ್ತಿಗೆ ಮಾದರಿ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ನಗರದ ರಾಷ್ಟ್ರೋತ್ಧಾನ ವಿದ್ಯಾಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ನಮ್ಮದು ಧರ್ಮ ಪ್ರಧಾನ ದೇಶ. ಧರ್ಮವನ್ನು ಬಿಟ್ಟು ನಾವು ನಡೆಯಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರಧ್ವಜದಲ್ಲಿ ‘ಧರ್ಮ ಚಕ್ರ’ ವನ್ನು ಅಳವಡಿಸಲಾಗಿದೆ. ಇದು ಭಗವಾನ್‌ ಬುದ್ಧನ ಧರ್ಮ ಚಕ್ರ’ ಎಂದರು.

‘ಸ್ವಾತಂತ್ರ್ಯ ಪ್ರಕೃತಿದತ್ತವಾದದ್ದು. ನಮ್ಮ ಹಿರಿಯರು ಸ್ವಾತಂತ್ರ್ಯವನ್ನು ಪ್ರಯಾಸದಿಂದ ಗೆದ್ದಿದ್ದಾರೆ. ತಿಲಕರ ಘೋಷಣೆ ಹಾಗೂ ಸುಭಾಷ್‌ಚಂದ್ರ ಬೋಸ್‌ ಬಲಿದಾನ ನಮ್ಮ ಬದುಕಿನ ಸ್ಫೂರ್ತಿಯಾಗಬೇಕು. ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಂಡು ನಡೆಯಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !