ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘11 ವರ್ಷಗಳಿಂದ ಸುಪ್ತ ಪ್ರತಿಭೆ ಹೊರತಂದ ಹೆಮ್ಮೆ’

ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಟ್ರಸ್ಟಿಗಳ ಅನಿಸಿಕೆ
Last Updated 7 ನವೆಂಬರ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನ ಕಳೆದ 11 ವರ್ಷಗಳಿಂದ ಸುಪ್ತ ವಿಜ್ಞಾನ, ಸಮಾಜ ವಿಜ್ಞಾನ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತಿದೆ. ಹೀಗೆ ಗುರುತಿಸಿಕೊಂಡವರು ನೊಬೆಲ್‌ನಂತಹ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ’ ಎಂದು ಪ್ರತಿಷ್ಠಾನದ ಟ್ರಸ್ಟಿ ಕೆ. ದಿನೇಶ್‌ ಹೇಳಿದರು.

‘ಅಭಿಜಿತ್‌ ಬ್ಯಾನರ್ಜಿ ಮತ್ತು ಅವರ ಪತ್ನಿಗೆ ಈ ಬಾರಿಯ ನೊಬೆಲ್‌ ಪ್ರಶಸ್ತಿ ಬಂದಿದೆ. ಇಬ್ಬರೂ ಇನ್ಫೊಸಿಸ್‌ ಪ್ರಶಸ್ತಿಗೆ ಪಾತ್ರರಾದವರು. ಅಕ್ಷಯ್‌ ವೆಂಕಟೇಶ್‌, ಮಂಜುಳಾ ಭಾರ್ಗವ ಅವರು ಗಣಿತದ ನೊಬೆಲ್‌ ಎಂದೇ ಖ್ಯಾತವಾದ ದಿ ಫೀಲ್ಡ್‌ ಮೆಡಲ್‌ಗೆ ಪಾತ್ರರಾದವರು. ರಘುರಾಮ ರಾಜನ್‌, ವಿಜಯ ರಾಘವನ್ ಸಹಿತ ಇನ್ನೂ ಹಲವಾರು ಮಂದಿ ದೇಶ, ವಿದೇಶಗಳಲ್ಲಿ ತಮ್ಮ ಸಾಧನೆಯ ಮೂಲಕವೇ ಹೆಸರಾದವರು. ಪ್ರತಿಷ್ಠಾನಕ್ಕೆಹೀಗಾಗಿ ಸೂಕ್ತ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳಿಗೇ ಪ್ರಶಸ್ತಿ ನೀಡುತ್ತಿರುವ ತೃಪ್ತಿ ಇದೆ’ ಎಂದು ಅವರು ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಮೆರಿಕದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವೆ ಬಹಳ ನಿಕಟ ಸಂಬಂಧವಿದೆ. ಅಲ್ಲಿ ಪ್ರೊಫೆಸರ್‌ಗಳು 10 ತಿಂಗಳು ಸಂಬಳ ಪಡೆದರೆ, ಎರಡು ತಿಂಗಳು ಉದ್ಯಮ ವಲಯದಲ್ಲಿನ ತಮ್ಮ ಸಂಪರ್ಕ, ಸಂವಹನ, ತಮ್ಮ ಸಂಶೋಧನೆಗಳ ನೆಲೆಯಲ್ಲೇ ಸಂಬಳ ಪಡೆಯಬೇಕಾಗುತ್ತದೆ. ಭಾರತದಲ್ಲಿ ಅಂತಹ ಪರಿಸ್ಥಿತಿಇಲ್ಲ. ಇದರಿಂದಾಗಿ ನಾವು ಸುಮಾರು 50 ವರ್ಷಗಳಷ್ಟು ಹಿಂದೆ ಉಳಿಯುವಂತಾಗಿದೆ’ ಎಂದು ಪ್ರತಿಷ್ಠಾನದ ಇನ್ನೊಬ್ಬ ಟ್ರಸ್ಟಿ ಶ್ರೀನಾಥ್‌ ಬಟ್ನಿ ಹೇಳಿದರು.

ಸ್ವತಂತ್ರ ಚಿಂತನೆ ಅಗತ್ಯ: ಪ್ರಶಸ್ತಿ ಘೋಷಣಾ ಸಮಾರಂಭದಲ್ಲಿ ಮಾತನಾಡಿದ ಇನ್ಫೊಸಿಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ಎನ್‌. ಆರ್. ನಾರಾಯಣ ಮೂರ್ತಿ, ನಮ್ಮ ಶಿಕ್ಷಣ ವ್ಯವಸ್ಥೆಯೇ ನಮ್ಮ ಮಕ್ಕಳನ್ನು ಹಿಂದೆ ಬೀಳುವಂತೆ ಮಾಡುತ್ತಿದೆ, ಸ್ವತಂತ್ರ ಚಿಂತನೆಯೇ ಅವರಿಗೆ ಇಲ್ಲವಾಗಿದೆ ಎಂದರು.

ಕ್ವಾಂಟಂ ಕಂಪ್ಯೂಟಿಂಗ್‌, ಡಿವಿಡಿ, ಅಣುಶಕ್ತಿಯಂತಹ ಸಂಶೋಧನೆಗಳೆಲ್ಲವೂ ಭಾರತೀಯರದಲ್ಲ. ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗಾದರೂ ಪರಿಹಾರ ಕಂಡುಕೊಳ್ಳುವ ಮಟ್ಟಿಗೆ ನಾವು ಸಂಶೋಧನೆಯನ್ನು ಸುಧಾರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT