ಶುಕ್ರವಾರ, ನವೆಂಬರ್ 15, 2019
27 °C
ಇನ್ಫೊಸಿಸ್‌ನಿಂದ ವಿಜೇತ ತಂಡಕ್ಕೆ ₹ 1 ಲಕ್ಷ ನಗದು ಬಹುಮಾನ ಪ್ರದಾನ

ಎಂಜಿನಿಯರ್ಸ್‌ ಸ್ಪರ್ಧೆಯ ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ಇನ್ಫೊಸಿಸ್‌ ನಡೆಸುವ ‘ಎಂಜಿನಿಯಸ್‍’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ರೋಹ್ಟಕ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂ) ವಿದ್ಯಾರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದಾರೆ. 

ಐಐಎಂನ ಕೃತಿ ನಗೋರಿ, ನೇಹಾ ಶೀನಂ ಮತ್ತು ಸಂಜಯ್ ಕೆ.ವಿ. ವಿಜೇತ ತಂಡದ ಸದಸ್ಯರಾಗಿದ್ದಾರೆ. ವಿಜೇತ ತಂಡ ₹ 1 ಲಕ್ಷ ನಗದು ಬಹುಮಾನವನ್ನು ಪಡೆದಿದೆ. ನಾಸಿಕ್‌ನ ಸಿಂಬಯೋಸಿಸ್ ಇನ್‍ಸ್ಟಿಟ್ಯೂಟ್ ಆಫ್ ಆಪರೇಷನ್ಸ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ₹ 60 ಸಾವಿರ ನಗದು ಬಹುಮಾನ ಪಡೆದಿದೆ. ವಿಜೇತ ಅಭ್ಯರ್ಥಿಗಳು ಇನ್ಫೊಸಿಸ್‌ ಕನ್ಸಲ್ಟಿಂಗ್‍ನಲ್ಲಿ ಉದ್ಯೋಗ ಸಂಬಂಧ ಸಂದರ್ಶನಕ್ಕೆ ಹಾಜರಾಗುವ ಅವಕಾಶವನ್ನೂ ಪಡೆದಿದ್ದಾರೆ.

ದೇಶದ ವಿವಿಧೆಡೆಯಿಂದ 80 ಆಯ್ದ ಬಿಸಿನೆಸ್‌ ಸ್ಕೂಲ್‌ನ 18 ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆನ್‍ಲೈನ್ ಮೂಲಕ ನಡೆಸಲಾದ ಬಿಸಿನೆಸ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಉತ್ತಮವಾಗಿ ಸಾಧನೆ ತೋರಿದ ಅಗ್ರ 30 ತಂಡಗಳನ್ನು ಮೂರನೇ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಈ ಸುತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇಸ್ ಸ್ಟಡಿಯನ್ನು ನೀಡಿ, ಅದಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ನೀಡುವಂತೆ ಸೂಚಿಸಲಾಗಿತ್ತು. ಇದರಲ್ಲಿ ಉತ್ತಮ ಸಾಧನೆ ತೋರಿದ ಐದು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ, ‌ತಮಗಿಷ್ಟವಾದ ವಿಷಯದ ಮೇಲೆ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸಲು ಸೂಚಿಸಲಾಗಿತ್ತು. 

ಪ್ರತಿಕ್ರಿಯಿಸಿ (+)