‘371–ಜೆ ತಿದ್ದುಪಡಿಯ ಸೌಲಭ್ಯಕ್ಕೆ ಸಹಮತ ನೀಡಿದ ನೌಕರರನ್ನು ಮಾತ್ರ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಸಹಮತ ನೀಡದ ಆ ಭಾಗದ ನೌಕರರನ್ನು ಕರ್ನಾಟಕದ ಕೋಟಾಗೆ ಸೇರಿಸಲಾಗಿದೆ. ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಬಾರದ ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ಜಲಮಂಡಳಿಯಂಥ ಕಚೇರಿಗಳಲ್ಲಿಯೂ ಕಲ್ಯಾಣ ಕರ್ನಾಟಕ ಕೋಟಾ ನಿಗದಿ ಮಾಡುವ ಮೂಲಕ ಇತರೆ ಭಾಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಹೇಳಿದರು.