ಬುಧವಾರ, ಜೂಲೈ 8, 2020
25 °C

ಮಳೆಗೆ ಕಳಚಿ ಬಿದ್ದ ತಪಾಸಣಾ ಶೆಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಮಿಳುನಾಡಿನಿಂದ ನಗರಕ್ಕೆ ಬರುವ ಪ್ರಯಾಣಿಕರನ್ನು ಕೋವಿಡ್–19 ತಪಾಸಣೆಗೆ ಒಳಪಡಿಸಲು ನಿರ್ಮಿಸಲಾಗಿದ್ದ ದೊಡ್ಡ ಗಾತ್ರ ಶೆಡ್ ಮಳೆಯಿಂದಾಗಿ ಕಳಚಿ ಬಿದ್ದಿದೆ.

ಆನೇಕಲ್ ಹಾಗೂ ಸುತ್ತಮುತ್ತ ಭಾನುವಾರ ಮಧ್ಯಾಹ್ನ ಮಳೆ ಆರ್ಭಟ ಜೋರಾಗಿತ್ತು. ಗಾಳಿಯೂ ವೇಗವಾಗಿ ಬೀಸಿತ್ತು.

ದಿನದ 24 ಗಂಟೆಯೂ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಳೆ ಬಂದ ವೇಳೆಯಲ್ಲೂ ಅವರೆಲ್ಲ ಶೆಡ್‌ನಲ್ಲಿದ್ದರು. ಶೆಡ್‌ ಕಳಚಿ ಬಿದ್ದು, ಕೆಲ ಅವಶೇಷಗಳು ಹಾರಿ ಹೋಗಿವೆ. ಸಿಬ್ಬಂದಿ ಶೆಡ್‌ನಿಂದ ಹೊರಗೆ ಬಂದು ಬೇರೆಡೆ ಆಶ್ರಯ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಶೆಡ್‌ನಲ್ಲಿದ್ದ ಕಂಪ್ಯೂಟರ್ ಸೇರಿ ಹಲವು ವಸ್ತುಗಳಿಗೆ ಹಾನಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು