ಸೋಮವಾರ, ಆಗಸ್ಟ್ 2, 2021
23 °C

₹ 44.79 ಲಕ್ಷ ಕಿತ್ತ ಇನ್‌ಸ್ಟಾಗ್ರಾಂ ಗೆಳತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಂ’ ಆ್ಯಪ್‌ ಮೂಲಕ ಸ್ನೇಹ ಬೆಳೆಸಿದ್ದ ಮಹಿಳೆಯೊಬ್ಬಳು, ಉಡುಗೊರೆ ಆಮಿಷವೊಡ್ಡಿ ನಗರದ ನಿವೃತ್ತ ಪ್ರಾಧ್ಯಾಪಕಿಯೊಬ್ಬರಿಂದ ₹ 44.79 ಲಕ್ಷ ಪಡೆದು ವಂಚಿಸಿದ್ದಾಳೆ.

ಕಲ್ಯಾಣನಗರ ನಿವಾಸಿಯಾಗಿರುವ 70 ವರ್ಷದ ನಿವೃತ್ತ ಪ್ರಾಧ್ಯಾಪಕಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ದೂರುದಾರರು ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾರೆ. ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಮಹಿಳೆ, ವಿದೇಶಿ ಪ್ರಜೆಯೆಂದು ಪರಿಚಯಿಸಿಕೊಂಡಿದ್ದಳು. ಕೆಲ ದಿನ ಚಾಟಿಂಗ್ ಮಾಡಿ ಆತ್ಮಿಯವಾಗಿ ಮಾತನಾಡಿದ್ದಳು’ ಎಂದು ಪೊಲೀಸರು ಹೇಳಿದರು.

‘ನಿಮ್ಮ ಸ್ನೇಹ ಇಷ್ಟವಾಗಿದೆ. ನಿಮಗೆ ಉಡುಗೊರೆ ಕಳುಹಿಸುತ್ತೇನೆ’ ಎಂದು ಮಹಿಳೆ ಹೇಳಿದ್ದರು. ಕೆಲ ದಿನ ಬಿಟ್ಟು ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ದೂರುದಾರರಿಗೆ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿಗೆ ಉಡುಗೊರೆ ಬಂದಿದೆ. ಬೆಲೆಬಾಳುವ ಚಿನ್ನಾಭರಣ ಹಾಗೂ ಕರೆನ್ಸಿ ಇದೆ. ಅದನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲು ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಬೇಕು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರರು, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 44.79 ಲಕ್ಷ ನೀಡಿದ್ದರು.’

‘ಹಣ ಪಡೆದ ನಂತರ ವಂಚಕರು, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಸೈಬರ್ ವಂಚಕರೇ ಮಹಿಳೆ ಹೆಸರಿನಲ್ಲಿ ಖಾತೆ ತೆರೆದು ವಂಚಿಸಿರುವ ಸಾಧ್ಯತೆ ಇದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು