ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಶುಲ್ಕ ಪಾವತಿಸಿದ ಗ್ರಾಹಕರಿಗೆ ಜಲಮಂಡಳಿಯಿಂದ ಬಡ್ಡಿ ಮನ್ನಾ

Last Updated 16 ಮೇ 2020, 12:06 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿಯೂ ನೀರಿನ ಶುಲ್ಕವನ್ನು ಸರಿಯಾಗಿ ಪಾವತಿಸಿದ ಗ್ರಾಹಕರಿಗೆ ಶುಲ್ಕದಲ್ಲಿನ ಬಡ್ಡಿ ಮನ್ನಾ ಮಾಡುವುದಾಗಿ ಬೆಂಗಳೂರು ಜಲಮಂಡಳಿ ಘೋಷಿಸಿದೆ.

‘ಕಳೆದ ಮಾರ್ಚ್‌–ಏಪ್ರಿಲ್‌ ತಿಂಗಳ ನೀರಿನ ಶುಲ್ಕವನ್ನು ಪಾವತಿಸದೇ ಇರುವ ಗ್ರಾಹಕರು ಮೇ ತಿಂಗಳೊಳಗೆ ಪಾವತಿಸಿದಲ್ಲಿ ಆ ಗ್ರಾಹಕರಿಗೆ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನ ಶುಲ್ಕದ ಬಡ್ಡಿಯನ್ನು ಮನ್ನಾ ಮಾಡಲಾಗುವುದು’ ಎಂದು ಅದು ತಿಳಿಸಿದೆ.

‘ಯಾವುದೇ ಗ್ರಾಹಕರು ಈಗಾಗಲೇ ಬಡ್ಡಿ ಸಹಿತ ಮಾರ್ಚ್‌–ಏಪ್ರಿಲ್‌ನ ಶುಲ್ಕ ಪಾವತಿಸಿದ್ದಲ್ಲಿ, ಮುಂದಿನ ತಿಂಗಳ ಬಿಲ್‌ನಲ್ಲಿ ಬಡ್ಡಿಯ ಮೊತ್ತವನ್ನು ಕಡಿತಗೊಳಿಸಲಾಗುವುದು. ಈವರೆಗೆ ಶುಲ್ಕ ಪಾವತಿಸದ ಗ್ರಾಹಕರು ಬಡ್ಡಿ ಮೊತ್ತವನ್ನು ಕಳೆದು ಉಳಿದ ಶುಲ್ಕವನ್ನು ಮಾತ್ರ ಪಾವತಿಸಬಹುದಾಗಿದೆ’ ಎಂದು ಜಲಮಂಡಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಂ. ಮಂಜುನಾಥ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 9.94 ಲಕ್ಷ ಗ್ರಾಹಕರಿಗೆ ಜಲಮಂಡಳಿಯು ನೀರು ಪೂರೈಸುತ್ತಿದ್ದು, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT