ಸೋಮವಾರ, ಜನವರಿ 20, 2020
26 °C
ಕವಿ ಡಾ.ದೊಡ್ಡರಂಗೇಗೌಡ ಅಭಿಮತ * ವಿವಿಧ ಲೇಖಕರ 37 ಪುಸ್ತಕಗಳು ಬಿಡುಗಡೆ

ವಿದ್ಯಾರ್ಥಿಗಳಲ್ಲಿ ಅಂತರಂಗದ ಹಸಿವು ಹೆಚ್ಚಬೇಕು: ಕವಿ ದೊಡ್ಡರಂಗೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿದ್ಯಾರ್ಥಿಗಳು ಅಂತರಂಗದ ಹಸಿವನ್ನು ಹೆಚ್ಚಿಸಿಕೊಂಡು, ಸಾಹಿತ್ಯ ಕೃತಿಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು’ ಎಂದು ಕವಿ ಡಾ. ದೊಡ್ಡರಂಗೇಗೌಡ ತಿಳಿಸಿದರು. 

ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ `ಹದಿಹರಯಕ್ಕೆ ಸಾಹಿತ್ಯ ಸುಧೆ' ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 37 ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಮಾತನಾಡಿದರು.

‘ದೇಹಕ್ಕೆ ಹಸಿವಾದಂತೆ ಮನಸ್ಸಿಗೂ ಆಗುತ್ತದೆ. ಹಾಗಾಗಿ ನಿರಂತರವಾದ ಅಧ್ಯಯನ ಅಗತ್ಯ. ಗ್ರಂಥಗಳಿಗೆ ಬದುಕನ್ನು ಮಾರ್ಪಡಿಸುವ ಶಕ್ತಿಯಿದೆ. ಸಮಾಜದ ಏಳುಬೀಳುಗಳ ಸಮಗ್ರ ಚಿತ್ರಣವನ್ನು ನಮಗೆ ಪುಸ್ತಕಗಳು ನೀಡಲಿವೆ. ಆದರೆ, ಇಂದಿನ ಯುವಜನತೆ ಮೊಬೈಲ್‌ನ ಹಿಂದೆ ಬಿದ್ದು, ಅನಗತ್ಯ ವಿಷಯಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಇದರಿಂದ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಮೊಬೈಲ್, ಟಿ.ವಿ ಮಾಧ್ಯಮಗಳ ಗೀಳಿನಿಂದ ಸಮಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು, ಉತ್ತಮ ಕೃತಿಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿ ಜೀವನವನ್ನು ಹಸನಾಗಿಸಿಕೊಳ್ಳಿ’ ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ‘ಇಂದಿನ ಮಕ್ಕಳು ಚಂದಮಾಮ, ಜಾನಪದ ಕತೆಗಳನ್ನು ಓದುತ್ತಿಲ್ಲ. ಬದಲಿಗೆ ಪಠ್ಯಪುಸ್ತಕಕ್ಕೆ ಸೀಮಿತವಾಗಿದ್ದಾರೆ. ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕತೆ, ಕಾದಂಬರಿ ಓದುವುದನ್ನು ರೂಢಿಸಿಕೊಳ್ಳಬೇಕು. ಐದು ವರ್ಷ ಕಳೆದರೂ ಮುಗಿಯದ ಧಾರಾವಾಹಿಗಳಿಗೆ ಸಮಯ ವ್ಯರ್ಥಮಾಡದೆ, ನಿತ್ಯ ಅರ್ಧ ತಾಸೂ ಪುಸ್ತಕ ಓದಿದರೂ 15 ದಿನಗಳಲ್ಲಿ ಒಂದು ಕಾದಂಬರಿ ಮುಗಿಸಬಹುದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು