ಪೀಣ್ಯ ದಾಸರಹಳ್ಳಿ: ‘ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅಸ್ಮಿತೆಯೊಂದಿಗೆ ಪ್ರತಿಭೆಯನ್ನು ಮರೆಯುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಸಾಹಿತಿ ವೈ.ಬಿ.ಎಚ್. ಜಯದೇವ್ ಅಭಿಪ್ರಾಯಪಟ್ಟರು.

ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಮಹಿಳೆ ಶೈಕ್ಷಣಿಕ, ಆರ್ಥಿಕವಾಗಿ ಸಬಲೆಯಾಗಿ ಸ್ವಾವಲಂಬಿಯಾಗಿದ್ದಾಳೆ. ತಾಂತ್ರಿಕ ಯುಗದಲ್ಲೂ ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅಪಾರ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಪುರುಷರ ಸಮಾನ ಸ್ಥಾನಮಾನವನ್ನು ಸಂಪಾದಿಸಿದ್ದಾಳೆ’ ಎಂದು ಹೇಳಿದರು.

ಶಾಸಕ ಎಸ್. ಮುನಿರಾಜು ಮಾತನಾಡಿ, ‘ಎಲ್ಲ ರಂಗದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಭಗವಂತ ಮಹಿಳೆಯರಿಗೆ ನೀಡಿದ್ದಾನೆ. ಶಕ್ತಿ ದೇವರ ಪೂಜೆ ಮಾಡಿ ಕುಟುಂಬವನ್ನು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳುವ ಕಾಳಜಿ ಮಹಿಳೆಯರಿಗಿದೆ’ ಎಂದರು.

ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ‘ನಮ್ಮ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ಕಂಪ್ಯೂಟರ್, ಹೊಲಿಗೆ, ಬ್ಯೂಟಿಷಿಯನ್ ತರಬೇತಿ ನೀಡಿ ಅವರಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುತ್ತಿದೆ’ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಭಿನಂದಿಸಲಾಯಿತು. ಸೇಂಟ್ ಮಾರ್ಕ್ಸ್ ಶಾಲೆಯ ಪ್ರಾಂಶುಪಾಲರಾದ ಚೈತ್ರ ಗೌಡ, ಆಸೆಂಟ್ ಕಾಲೇಜಿನ ಉಪನ್ಯಾಸಕಿ ಶ್ವೇತಾ ವೆಂಕಟೇಶ್, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.