ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಎಚ್ಬಿಆರ್ ಲೇಔಟ್ನ ಇಸ್ಕಾನ್ನಲ್ಲಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇಸ್ಕಾನ್ ಗರ್ಲ್ಸ್ ಫೋರಂ ವತಿಯಿಂದ ಆಯೋಜಿಸಿದ್ದ ‘ಕಿಶೋರಿ ಫೆಸ್ಟ್’ ನಲ್ಲಿ ಯುವತಿಯರು, ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ, ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧೆ, ಪ್ರಶ್ನೋತ್ತರ ಮತ್ತು ತಂಡ ಚಟುವಟಿಕೆಗಳು ನಡೆದವು. ನೃತ್ಯ ಪ್ರದರ್ಶನ, ವೇದಿಕ್ ರ್ಯಾಂಪ್ ವಾಕ್ ಹಾಗೂ ನಾಟಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು.

ಎಚ್ಬಿಆರ್ ಲೇಔಟ್ ಶಾಖೆಯ ಅಧ್ಯಕ್ಷ ವರದ ಕೃಷ್ಣ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶುತೋಷ್ ಸಿದ್ದಪ್ಪ ಅವರು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.

ಭಗವದ್ಗೀತೆ ಕುರಿತ ವಿಶೇಷ ಉಪನ್ಯಾಸ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.