‘ಅಸಹಿಷ್ಣುತೆ ತೊಲಗಿಸುವ ಬುದ್ಧನ ತತ್ವ’

7

‘ಅಸಹಿಷ್ಣುತೆ ತೊಲಗಿಸುವ ಬುದ್ಧನ ತತ್ವ’

Published:
Updated:

ಬೆಂಗಳೂರು: ‘ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಾನವತಾವಾದಿ ಬುದ್ಧನ ನುಡಿಗಳು ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವನ್ನು ತಿಳಿಗೊಳಿಸಲು ಇಂದಿಗೂ ಮಾರ್ಗದರ್ಶಿ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಸಹಕಾರ‌ನಗರದ ಆಟದ ಮೈದಾನದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘವು ಶುಕ್ರವಾರ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರವಚನ ನೀಡಿದರು.‌

‘ಜಾತೀಯತೆ ಹೋಗಲಾಡಿಸಿ ಸಮಾನತೆಯನ್ನು ತರಲು ಹಾಗೂ ಸಹಬಾಳ್ವೆ ನಡೆಸಲು ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅಹಿಂಸಾ ತತ್ವದಿಂದ, ತ್ಯಾಗ, ದಾನಗಳಿಂದ ಲೋಕ ಕಲ್ಯಾಣ ಸಾಧಿಸಬಹುದು ಎಂಬುದನ್ನು ಸಾರಿದಾತ ಬುದ್ಧ’ ಎಂದು ಹೇಳಿದರು.‌

‘ಜೀವನದಲ್ಲಿ ಎಲ್ಲವನ್ನೂ ಗಳಿಸಿ ಬದುಕಿನ ಕೊನೆಯಲ್ಲಿ ನಮಗೆ ನಾವೇ ಮುಂದೇನು ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತೇವೆ. ಸತ್ಸಂಗ, ಧ್ಯಾನ ಹಾಗೂ ಪ್ರವಚನ ಕೇಳುವ ಆಸಕ್ತಿ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಂತೋಷ, ನೆಮ್ಮದಿ ಕಾಣಬಹುದು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !