ಬುಧವಾರ, ನವೆಂಬರ್ 13, 2019
18 °C

ಕಾವೇರಿ ಕೂಗು 8ರಂದು ನಗರಕ್ಕೆ

Published:
Updated:

ಬೆಂಗಳೂರು: ಕಾವೇರಿ ನದಿ ಸಂರಕ್ಷಣೆಗಾಗಿ ಈಶ ಫೌಂಡೇಶನ್ ಆಶ್ರಯದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಅಂಗವಾಗಿ, ತಲಕಾವೇರಿಯಿಂದ ಬೈಕ್ ರ‍್ಯಾಲಿ ಇದೇ 3ರಂದು ಆರಂಭವಾಗಲಿದೆ. ಈ ರ್‍ಯಾಲಿ 8ರಂದು ಬೆಂಗಳೂರು ತಲುಪಲಿದೆ.

ಕಾವೇರಿ ಉಗಮ ಸ್ಥಾನದಿಂದ ಸಂಚಾರ ಪ್ರಾರಂಭವಾಗಿ ಪೊಂಪು ಹಾರ್‌ನಲ್ಲಿರುವ ತಿರುವರೂರ್ ಮೂಲಕ ಸಾಗಿ, ಚೆನ್ನೈನಲ್ಲಿ ಮುಕ್ತಾಯವಾಗಲಿದೆ. ಹಾದಿಯುದ್ದಕ್ಕೂ ಹಲವೆಡೆ ಕಾವೇರಿ ಕೂಗಿನ ಬಗ್ಗೆ ಅರಿವು ಮೂಡಿಸಲಾಗುವುದು. 4ರಂದು ಹುಣಸೂರು, 5ರಂದು ಮೈಸೂರಿನ ಮಾನಸ ಗಂಗೋತ್ರಿಯ ಆ್ಯಂಫಿ ಥಿಯೇಟರ್, 6ರಂದು ಮಂಡ್ಯ ಸುಭಾಷ್ ನಗರದ ಅಂಬೇಡ್ಕರ್ ಭವನದಲ್ಲಿ ಮತ್ತು 8ರಂದು ಬೆಂಗಳೂರಿನ ತ್ರಿಪುರ ವಾಸಿನಿ ‌ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರತಿಕ್ರಿಯಿಸಿ (+)