ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಕಾನ್‌ನಲ್ಲಿ ‘ಸಿಂಗ್‌, ಡಾನ್ಸ್ ಆ್ಯಂಡ್‌ ಪ್ರೇ’ ಕೃತಿ ಬಿಡುಗಡೆ

Last Updated 10 ಜುಲೈ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು:ಲೇಖಕ ಡಾ.ಹಿಂಡೋಲ್‌ ಸೇನ್‌ ಗುಪ್ತಾ ಅವರು ಇಸ್ಕಾನ್‌ನ ಶ್ರೀಲ ಪ್ರಭುಪಾದರ ಕುರಿತು ಬರೆದಿರುವ ‘ಸಿಂಗ್‌, ಡಾನ್ಸ್ ಆ್ಯಂಡ್‌ ಪ್ರೇ’ ಕೃತಿ ಯನ್ನು ಭಾನುವಾರ ಇಸ್ಕಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ‘ಸನ್ಯಾಸಿ ಯೊಬ್ಬರ ಕಷ್ಟ ಹಾಗೂ ಅವರ ಯಶಸ್ಸಿನ ಕುರಿತು ಹಿಂಡೋಲ್‌
ಅವರು ಬರೆದಿದ್ದಾರೆ. ಪುಸ್ತಕ ಓದಿದಾಗ ಶ್ರೀಲ ಪ್ರಭುಪಾದರು ಒಬ್ಬ ವ್ಯಕ್ತಿಯಾಗಿ ಯಾರು ಎಂದು ಸ್ಪಷ್ಟವಾಯಿತು’ ಎಂದರು.

ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಮಾತನಾಡಿ, ಶ್ರೀಲ ಪ್ರಭುಪಾದರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ
ರಾಯಭಾರಿ ಆಗಿದ್ದರು. ಭಾರತೀಯ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತಂದವರು ಅವರು ಎಂದರು.

ಲೇಖಕ ಡಾ.ಹಿಂಡೋಲ್‌‌ ಸೇನ್‌ ಗುಪ್ತಾ ಮಾತನಾಡಿ, ಪ್ರಭುಪಾದರದ್ದು ಶ್ರೇಷ್ಠ ವ್ಯಕ್ತಿತ್ವ ಎಂದು ಹೇಳಿದರು.

ಇಸ್ರೊಅಧ್ಯಕ್ಷ ಎಸ್‌. ಸೋಮನಾಥ್‌, ಇಸ್ಕಾನ್‌ ಅಕ್ಷಯ ಪಾತ್ರದ ಅಧ್ಯಕ್ಷ ಮಧು ಪಂಡಿತ ದಾಸ್‌, ಉಪಾಧ್ಯಕ್ಷ ಚಂಚಲಪತಿ ದಾಸ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT