ಭಾನುವಾರ, ನವೆಂಬರ್ 17, 2019
21 °C

ಪೊಲೀಸರನ್ನು ತಳ್ಳಿ ಕೈದಿ ಪರಾರಿ

Published:
Updated:

ಬೆಂಗಳೂರು: ಜಯದೇವ ಆಸ್ಪತ್ರೆಯಿಂದ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರನ್ನು ತಳ್ಳಿ ಬೀಳಿಸಿ, ಕೈದಿ ಬಸವರಾಜ ಕಾರಡಗಿಮಠ (47) ಎಂಬಾತ ಪರಾರಿಯಾಗಿದ್ದಾನೆ.

ಆ ಸಂಬಂಧ ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಬಸವರಾಜ, ಅನಾರೋಗ್ಯದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಆತನನ್ನು ಇತ್ತೀಚೆಗೆ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ತಿಲಕ್‌ನಗರ ಪೊಲೀಸರು ಹೇಳಿದರು.

‘ಬಸವರಾಜ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ, ಜೈಲಿಗೆ ಕರೆದೊಯ್ಯುವಂತೆ ವೈದ್ಯರು ಹೇಳಿದ್ದರು. ಇದೇ 4ರಂದು ಎಎಸ್‌ಐ ಕೆ. ಶಿವಮೂರ್ತಿ ಹಾಗೂ ಸಿಬ್ಬಂದಿ, ಆತನನ್ನು ಆಸ್ಪತ್ರೆಯಿಂದ ಜೈಲಿಗೆ ಕರೆದೊಯ್ಯುತ್ತಿದ್ದರು. ಅದೇ ವೇಳೆ ಕೈದಿ ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)