‘ಜೈನ್ ಸಮೂಹದಿಂದ ಐತಿಹಾಸಿಕ ಕಲ್ಲುಕಟ್ಟಡ ನವೀಕರಣ’

ಬೆಂಗಳೂರು: ‘ಮಲ್ಲೇಶ್ವರದ 18ನೇ ತಿರುವಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐತಿಹಾಸಿಕ ಕಲ್ಲುಕಟ್ಟಡ ನವೀಕರಿಸುವ ಜವಾಬ್ದಾರಿಯನ್ನು ಜೈನ್ ಸಮೂಹ ವಹಿಸಿಕೊಂಡಿದೆ. ಇದು ಖುಷಿಯ ವಿಷಯ’ ಎಂದು ಮಲ್ಲೇಶ್ವರದ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ತಿಳಿಸಿದರು.
ಜೈನ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಚೆನ್‌ರಾಜ್ ರಾಯ್‌ಚಂದ್ ಹಾಗೂ ಇತರ ಅಧಿಕಾರಿಗಳೊಂದಿಗೆ ಕಟ್ಟಡ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
‘ಈ ಕಟ್ಟಡ ನಾಡಿನ ಹೆಮ್ಮೆ. ಇದನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ಈ ಕಟ್ಟಡ ಹಾಗೂ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಆರ್.ಸಿ.ಕಾಲೇಜಿನ ಕಟ್ಟಡ ನವೀಕರಿಸಲು ನೆರವಾಗುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಜೈನ್ ಸಮೂಹದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕಟ್ಟಡಗಳು ಪರಂಪರೆಯ ಹೆಗ್ಗುರುತು. ಇವುಗಳನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳಬೇಕಿದೆ. ನವೀಕರಣದ ಸಂಪೂರ್ಣ ವೆಚ್ಚವನ್ನು ಜೈನ್ ಸಮೂಹದವರೇ ಭರಿಸಲಿದ್ದಾರೆ. ಇದು ಸ್ವಾಗತಾರ್ಹ ನಡೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.