ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆ ತ್ಯಾಜ್ಯ ತೆರವಿಗೆ ‘ಜಲ್‌ದೋಸ್ತ್‌’

Published : 3 ಆಗಸ್ಟ್ 2023, 0:30 IST
Last Updated : 3 ಆಗಸ್ಟ್ 2023, 0:30 IST
ಫಾಲೋ ಮಾಡಿ
Comments

ಬೆಂಗಳೂರು: ಕೆರೆಗಳಲ್ಲಿ ತೇಲುವ ಜಲಕಳೆ ಹಾಗೂ ತ್ಯಾಜ್ಯವನ್ನು ತೆರವು ಮಾಡಲು ಬಿಬಿಎಂಪಿ ನೀಡಿರುವ ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಸಿಎಸ್‌ಐಆರ್–ಎನ್‌ಎಎಲ್‌, ‘ಜಲ್‌ದೋಸ್ತ್‌–ಏರ್‌ಬೋಟ್‌ ಎಂಕೆ–2’ ಉನ್ನತೀಕರಿಸಿದ ಬೋಟ್‌ ಅನ್ನು ತಯಾರಿಸಿದೆ.

ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌)– ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯ (ಎನ್‌ಎಎಲ್‌) ಈ ಏರ್‌ಬೋಟ್‌ ಉತ್ಪಾದನೆ ಆರಂಭಿಸಿದೆ. ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಇವುಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಎನ್‌ಎಎಲ್‌ ನಿರ್ದೇಶಕ ಅಭಯ್‌ ಪಶಿಲ್ಕರ್‌ ಸುದ್ದಿಗಾರರಿಗೆ ತಿಳಿಸಿದರು.

ಹಲಸೂರು ಕೆರೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಲಾಗುತ್ತದೆ. ಶ್ರೀವಾರಿ ಎಂಜಿನಿಯರಿಂಗ್‌ ಸಿಸ್ಟಮ್ಸ್‌ ವತಿಯಿಂದ ಬಿಬಿಎಂಪಿಯ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಮಾಡಲಾಗುತ್ತದೆ ಎಂದರು.

‘ಜಲ್‌ದೋಸ್ತ್‌’ ಏರ್‌ಬೋಟ್‌ ಸ್ಟೀಲ್‌–ಮೆಸ್‌ ಹೊಂದಿದ್ದು, ಬೆಲ್ಟ್‌ ವ್ಯವಸ್ಥೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ದಡಕ್ಕೆ ಬಂದು ಅನ್ನು ಸುರಿಯಲಾಗುತ್ತದೆ. ಮೂರು ಟನ್‌ ತ್ಯಾಜ್ಯವನ್ನು ಬೋಟ್‌ನಲ್ಲಿ ಸಂಗ್ರಹಿಸಬಹುದು. ಒಂದು ಎಕರೆ ಪ್ರದೇಶವನ್ನು 8 ಗಂಟೆಗಳಲ್ಲಿ ಸ್ವಚ್ಛಗೊಳಿಸುತ್ತದೆ. ಒಂದು ಗಂಟೆಗೆ ಐದು ಲೀಟರ್‌ ಡೀಸೆಲ್‌ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT