ಭಾನುವಾರ, ಜೂನ್ 13, 2021
20 °C

ಜಯದೇವ ಆಸ್ಪತ್ರೆಯಲ್ಲಿ ದಾಂಧಲೆ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಕಿಟಕಿ ಹಾಗೂ ಬಾಗಿಲುಗಳ ಗಾಜು ಒಡೆದು ಹಾಕಿದ್ದ ಆರೋಪದಡಿ ಇಬ್ಬರನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

‘ಸಯ್ಯದ್ ಖಾಸಿರ್ ಮತ್ತು ವಸೀಂ ಪಾಷಾ ಬಂಧಿತರು. ಇದೇ 2ರಂದು ನಡೆದಿದ್ದ ದಾಂದಲೆ ಸಂಬಂಧ ಆಸ್ಪತ್ರೆಯವರು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಎದೆನೋವಿನಿಂದ ಬಳಲುತ್ತಿದ್ದ ಡಿ.ಜೆ.ಹಳ್ಳಿಯ ನಿವಾಸಿ ಅನ್ವರ್ ಪಾಷಾ ಎಂಬುವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನ್ಸರ್‌ ಪಾಷಾ ಮೃತಪಟ್ಟಿದ್ದರು. ಅದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಹಾಗೂ ಅವರ ಕಡೆಯವರು, ಆಸ್ಪತ್ರೆಗೆ ನುಗ್ಗಿ ದಾಂದಲೆ ಮಾಡಿದ್ದರು’ ಎಂದೂ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು