ಟೀಕೆಗೊಳಗಾದ ಜೆಡಿಎಸ್‌ನ ಭೋಜೇಗೌಡ

7

ಟೀಕೆಗೊಳಗಾದ ಜೆಡಿಎಸ್‌ನ ಭೋಜೇಗೌಡ

Published:
Updated:

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯರು ಮಾತನಾಡುವಾಗ ಪದೇ ಪದೇ ಅಡ್ಡಿಪಡಿಸುತ್ತಿದ್ದ ಜೆಡಿಎಸ್‌ನ ಎಚ್‌.ಎಲ್‌.ಭೋಜೇಗೌಡ ಅವರು ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಇತರ ಸದಸ್ಯರಿಂದ ತೀವ್ರ ಟೀಕೆಗೆ ಗುರಿಯಾದರು.

ಬಿಜೆಪಿಯ ಪ್ರಾಣೇಶ್‌ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ, ‘ನಾವು 104 ಸೀಟುಗಳನ್ನು ಗೆದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. 37 ಸ್ಥಾನ ಗೆದ್ದ ಪಕ್ಷದವರು ಮುಖ್ಯಮಂತ್ರಿ ಆಗಿದ್ದಾರೆ. ಇವರಿಗೆ 79 ಸ್ಥಾನ ಗೆದ್ದ ಕಾಂಗ್ರೆಸ್‌ ಬೆಂಬಲ ನೀಡಿದೆ’ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭೋಜೇಗೌಡ ಅವರು ಗದ್ದಲ ಎಬ್ಬಿಸುವ ರೀತಿಯಲ್ಲಿ ಅಡ್ಡಿಪಡಿಸಿದರು.

 ‘ಸದನದಲ್ಲಿ ಸದಸ್ಯರು ಮಾತನಾಡುವಾಗ ಭೋಜೇಗೌಡರು ಅಡ್ಡಿ ಪಡಿಸುವುದು ಸರಿಯಲ್ಲ. ಹೊಸದಾಗಿ ಆಯ್ಕೆ ಆಗಿ ಬಂದಿರುವ ಅವರು ಕಲಾಪವನ್ನು ನೋಡಿ ಕಲಿಯಬೇಕು. ಸುಮ್ಮನೆ ಗದ್ದಲ ಎಬ್ಬಿಸುವುದು ಸರಿಯಲ್ಲ’ ಎಂದು ವಿರೋಧ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ಕೆ.ಬಿ.ಶಾಣಪ್ಪ, ಆಯನೂರು ಮಂಜುನಾಥ್‌ ಮತ್ತು ಇತರ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !