ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿನ್ನಿಪೇಟೆ ವಾರ್ಡ್‌ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಐಶ್ವರ್ಯಾ

Last Updated 20 ಜೂನ್ 2018, 4:54 IST
ಅಕ್ಷರ ಗಾತ್ರ

ಬೆಂಗಳೂರು:ಬಿನ್ನಿಪೇಟೆ ಪ್ರದೇಶದ ಬಿಬಿಎಂಪಿ ವಾರ್ಡ್‌ – 121ರ ಉಪಚುನಾವಣೆಯಲ್ಲಿಜೆಡಿಎಸ್ ಅಭ್ಯರ್ಥಿಐಶ್ವರ್ಯ ಗೆಲುವಿನ ನಗೆ ಬೀರಿದ್ದಾರೆ.ವಾರ್ಡ್‌ನ ಸದಸ್ಯರಾಗಿದ್ದ ಮಹದೇವಮ್ಮ ನಿಧನದಿಂದ ತೆರವಾದ ಸ್ಥಾನಕ್ಕೆ ಇದೇ ತಿಂಗಳ 18ರಂದು ಚುನಾವಣೆ ನಡೆದಿತ್ತು.

ಐಶ್ವರ್ಯಾಒಟ್ಟು 1939 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮಹದೇವಮ್ಮ ಅವರ ಪುತ್ರಿ ಐಶ್ವರ್ಯಾ ಬಿ.ಎನ್‌. (ಜೆಡಿಎಸ್‌), ಚಾಮುಂಡೇಶ್ವರಿ ಜಿ. (ಬಿಜೆಪಿ), ವಿದ್ಯಾ ಶಶಿಕುಮಾರ್‌ (ಕಾಂಗ್ರೆಸ್‌) ಕಣಕ್ಕಿಳಿದಿದ್ದರು.

ಐಶ್ವರ್ಯಾ ಪರ ಒಟ್ಟು7188 ಮತಗಳು ಚಲಾವಣೆಯಾಗಿದ್ದವು.

ಈವಾರ್ಡ್ ನಲ್ಲಿ ಒಟ್ಟು 34,582 ಮತದಾರರಿದ್ದು, 17,746 ಪುರುಷ ಮತ್ತು 16826 ಮಹಿಳಾ ಮತದಾರರಿದ್ದಾರೆ.

ಇಲ್ಲಿ ನೋಟಾಗೆ 159 ಮತಗಳು ಚಲಾವಣೆಯಾಗಿದೆ. ಒಟ್ಟು 15,051 ಮತಗಳು ಚಲಾವಣೆಯಾಗಿದೆ.

ಮಹದೇವಮ್ಮ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆಐಶ್ವರ್ಯಾ ಅವರಿಗೆ ಕಾಂಗ್ರೆಸ್ಟಿಕೆಟ್ ನೀಡಿರಲಿಲ್ಲ. ಕಾಂಗ್ರೆಸ್ ವಿದ್ಯಾ ಶಶಿಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದಾಗಐಶ್ವರ್ಯಾ ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದರು.

ಚುನಾವಣೆ ಫಲಿತಾಂಶ ಪ್ರಕಟವಾದ ನಂತರನೂತನ ಕಾರ್ಪೊರೇಟರ್ ಐಶ್ವರ್ಯಾ ತಾಯಿ ಮಹದೇವಮ್ಮ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ ಅವರು ದಿನೇಶ್ ಗುಂಡೂರಾವ್ ಇನ್ನಾದ್ರೂ ಅರ್ಥ ಮಾಡಿಕೊಳ್ಳಬೇಕು. ಹಣ ಹಂಚಿದರೆ ಮತ ಹಾಕುತ್ತಾರೆ ಎನ್ನುವ ಅವರ ಭಾವನೆಗೆ ಜನ ಸರಿಯಾದ ಉತ್ತರ ನೀಡಿದ್ದಾರೆ

'ಬಿನ್ನಿಪೇಟೆ ಕಾಂಗ್ರೆಸ್ ಭದ್ರಕೋಟೆ ಅಂತ ಅವರೇ ಹೇಳಿಕೊಳ್ಳುತ್ತಿದ್ದರು. ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಬಿನ್ನಿಪೇಟೆ ಅನ್ನುತ್ತಿದ್ದರು. ಈ ಫಲಿತಾಂಶ ಅವರಿಗೆ ತಕ್ಕ ಪಾಠ ಕಲಿಸಿದೆ'. 'ಇದು ಜನರ ಗೆಲುವು, ಬಿನ್ನಿಪೇಟೆಯಲ್ಲಿ ಕಾಂಗ್ರೆಸ್ ಇದ್ದಿದ್ದೇ ನಮ್ಮ ಅಪ್ಪ ಬಿಟಿಎಸ್ ನಾಗರಾಜ್ ಅವರಿಂದ. ಇನ್ನಾದರೂ ಅವರು ಇದು ಕಾಂಗ್ರೆಸ್ ಕೋಟೆ ಎನ್ನುವುದನ್ನು ಬಿಡಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT