ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಮಂಡಳಿ ಪೈಪ್‌ ಒಡೆದವರ ವಿರುದ್ಧ ಕ್ರಮ’

‘ಜೀವಾಮೃತ ಸಂಕಿರಣ’ ವಿಚಾರ ಸಂಕಿರಣ
Last Updated 10 ಆಗಸ್ಟ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಓ.ಎಫ್‌ಸಿ ಅಥವಾ ಕೇಬಲ್‌ ಜೋಡಣಾ ಸಮಯದಲ್ಲಿ ಜಲಮಂಡಳಿಯ ಪೈಪ್‌ಗಳನ್ನು ಒಡೆದ ವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಲ ಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್ ಎಚ್ಚರಿಸಿದರು.

ಜಲಮಂಡಳಿ ವತಿಯಿಂದ ಆಯೋಜಿಸಿದ್ದ ‘ಜೀವಾಮೃತ’ ವಿಚಾರ ಸಂಕಿರಣದಲ್ಲಿ ಮಾತ ನಾಡಿದ ಅವರು, ‘ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಸುವ ಕುರಿತು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹಣಾ ರಚನೆಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುವುದು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸುವುದನ್ನು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿ
ಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.

ಜಲತಜ್ಞ ಎ.ಆರ್. ಶಿವಕುಮಾರ್‌, ‘ಚಂಡೀಗಡದಲ್ಲಿ ನೀರಿನ ಸಂಪ್‌ಗಳಲ್ಲಿ ನೀರು ತುಂಬಿ ಹರಿದು ಪೋಲಾಗುವುದನ್ನು ಫೋಟೊ ತೆಗೆದು ನೀಡಿದಲ್ಲಿ, ಆ ಕಟ್ಟಡದ ಮಾಲೀಕರಿಗೆ ₹2,000 ದಂಡ ವಿಧಿಸಲಾಗುತ್ತದೆ. ಇದೇ ಮಾದರಿಯನ್ನು ಬೆಂಗಳೂರಿ ನಲ್ಲಿಯೂ ಅನುಸರಿಸಿದರೆ ನೀರಿನ ಅಪವ್ಯಯವನ್ನು ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

‘ತಮ್ಮ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಒಟ್ಟು 7ಕೊಳವೆ ಬಾವಿಗಳಿದ್ದು, ಅವುಗಳ ನೀರನ್ನು ಮಾತ್ರ ಬಳಕೆ ಮಾಡುತ್ತಿದ್ದೇವೆ. ಮಳೆ ನೀರನ್ನು ಸಂಗ್ರಹಿಸಿ, ಅದರ ಮರುಬಳಕೆ ಮಾಡುತ್ತಿದ್ದು, ಕಾವೇರಿ ನೀರನ್ನು ಅವಲಂಬಿಸಿಯೇ ಇಲ್ಲ’ ಎಂದು ಗ್ಲೋಬಲ್‌ ಅಕಾಡೆಮಿ ಸಂಸ್ಥೆಯ ಪ್ರತಿನಿಧಿಗಳು ಹೇಳಿದರು.

‘ನಮ್ಮ ಕಂಪನಿಯ ಮಂಗಳೂರು ಶಾಖೆಯಲ್ಲಿಹವಾ ನಿಯಂತ್ರಣ ವ್ಯವಸ್ಥೆಯಿಂದ ಬರುವ ಘನೀಕರಣಗೊಂಡ ನೀರನ್ನು ಕೂಲಿಂಗ್ ಟವರ್ಸ್‌್ಗಳಲ್ಲಿನ ಅವಶ್ಯಕತೆಗೆ ಬಳಸಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಇನ್ಫೊಸಿಸ್‌ ಸಂಸ್ಥೆಯ ಪ್ರತಿನಿಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT