ಜಿಗಣಿ: ತಾಲ್ಲೂಕಿನ ಯಾರಂಡಹಳ್ಳಿಯಲ್ಲಿ ದರೋಡೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ನಾಯಕ್ ಅಲಿಯಾಸ್ ಕುಂಟ ಕೃಷ್ಣ, ನವೀನ್ ಅಲಿಯಾಸ್ ರಾಬರಿ ಕಾಳ ಬಂಧಿತರು. ಕೃಷ್ಣ ಒಂಟಿ ಕಾಲಿನಲ್ಲಿಯೇ ಕಳ್ಳತನ ಮಾಡುತ್ತಿದ್ದ. ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಆರೋಪ ನವೀನ್ ಮೇಲಿದೆ.

ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಯಾರಂಡಹಳ್ಳಿಯಲ್ಲಿ ಸುಂದರ್ ರಾಜ್ ಎಂಬುವವರನ್ನು ಕೃಷ್ಣ ಮತ್ತು ನವೀನ್ ಆಟೊಗೆ ಹತ್ತಿಸಿಕೊಂಡು ಜೇಬಿನಲ್ಲಿದ್ದ ಹಣ, ಮೊಬೈಲ್ ಕಿತ್ತುಕೊಂಡಿದ್ದರು. ಬಳಿಕ ಎಟಿಎಂ ಕಾರ್ಡ್ ಕೊಡುವಂತೆ ಚಿತ್ರಹಿಂಸೆ ನೀಡಿ ಎಟಿಎಂನಲ್ಲಿದ್ದ ₹1ಲಕ್ಷ ಡ್ರಾ ಮಾಡಿಸಿಕೊಂಡು, ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.

ಹಣ ಕಳೆದುಕೊಂಡ ವ್ಯಕ್ತಿ ನೀಡಿದ ದೂರಿನ ಮೇರೆಗೆ ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಕೃಷ್ಣ ನಾಯಕ್ ಚಿಕ್ಕ ವಯಸ್ಸಿನಿಂದ ಕಳ್ಳತನ, ದರೋಡೆ ಮಾಡುತ್ತಿದ್ದ. ಆಟೊದಲ್ಲಿ ವ್ಯಕ್ತಿಗಳನ್ನು ಅಪಹರಿಸಿ ದರೋಡೆ ಮಾಡುತ್ತಿದ್ದ. ಆರೋಪಿ ಕಾಲಿಗೆ ಎಲೆಕ್ಟ್ರಾನಿಕ್ಸಿಟಿ ಪೊಲೀಸರು ಗುಂಡು ಹೊಡೆದಿದ್ದರಿಂದ ಒಂದು ಕಾಲು ಕಳೆದುಕೊಂಡಿದ್ದ.

ಕಾಲು ಕಳೆದುಕೊಂಡಿದ್ದರೂ ಕೃಷ್ಣ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, 20ಕ್ಕೂ ಹೆಚ್ಚು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೆಬ್ಬಗೋಡಿ, ಜಿಗಣಿ, ಬನ್ನೇರುಘಟ್ಟ, ಸೂರ್ಯಸಿಟಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಬ್ಬ ಆರೋಪಿ ನವೀನ್ 2021ರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ. ಜೈಲಿನಿಂದ ಬಂದಿದ್ದರೂ ಹಳೆ ಚಾಳಿ ಮುಂದುವರೆಸಿ ಹಲವೆಡೆ ದರೋಡೆ ನಡೆಸುತ್ತಿದ್ದ. ಇವರಿಬ್ಬರು ಸೇರಿ ಹಲವಡೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-14-739316886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.