ಭಾನುವಾರ, ಆಗಸ್ಟ್ 25, 2019
28 °C

‘ವ್ಯಕ್ತಿತ್ವಕ್ಕಿಂತ ವಸ್ತ್ರಕ್ಕೆ ಹೆಚ್ಚಿನ ಆದ್ಯತೆ’

Published:
Updated:
Prajavani

ಬೆಂಗಳೂರು: ‘ಹಿಂದಿನ ಕಾಲದಲ್ಲಿ ಮನುಷ್ಯರು ತಮ್ಮ ಮಾನ ಉಳಿಸಿಕೊಳ್ಳಲು ಬಟ್ಟೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿ
ದ್ದರು. ಆದರೆ, ಈಗಿನ ಸಮಾಜದಲ್ಲಿ ಧರಿಸಿರುವ ವಸ್ತ್ರದಿಂದಲೇ ವ್ಯಕ್ತಿಯನ್ನು ಗೌರವಿಸುವ ಪದ್ಧತಿ ಬೇರೂರಿದೆ. ಇಲ್ಲಿ ವ್ಯಕ್ತಿಯ ಯೋಗ್ಯತೆಗಿಂತ ಧರಿಸುವ ಬಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ’ ಎಂದು ಸಚ್ಚಿದಾನಂದ ಅದ್ವೈತ ಆಶ್ರಮ ಮಠದ ಅದ್ವಯಾನಂದೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಂಯುಕ್ತ ಸ್ವಕುಳಸಾಳಿ (ನೇಕಾರಿಕೆ) ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಭಗವಾನ್‌ ಜಿಹ್ವೇಶ್ವರ ಜಯಂತಿ, ಗಣ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸ್ವಕುಳಸಾಳಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ‍ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಸಂಘದ ಅಧ್ಯಕ್ಷ ಗಿರಿಧರ್‌ ಗಾಯಕ್ವಾಡ್‌, ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ್‌ ಭಂಡಾರೆ, ಲೇಖಕ ಜನಾರ್ದನ ಪಾಣಿಭಾತೆ, ಸೂರ್ಯಕಾಂತ್‌ ಏಕಬೋಟೆ, ಶ್ರೀಧರ ಕೆ.ಮಾತೃಬಾಯಿ, ಶ್ಯಾಮಲಾ ಲಕ್ಷ್ಮೀನಾರಾಯಣ ಸವ್ವಾಸೇರೆ, ಮಲ್ಲೇಶ್‌ ಆರ್‌.ಖಡಾಂಟೆ, ಮನೋಹರ ಡಿ.ಕರ್ವೇಕರ್‌ ಇದ್ದರು.

Post Comments (+)