ಶನಿವಾರ, ಮೇ 8, 2021
20 °C

₹ 10 ಜಿಯೊ ರಿಚಾರ್ಜ್‌ಗಾಗಿ ₹ 2.80 ಲಕ್ಷ ಕಳೆದುಕೊಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ₹ 10 ಜಿಯೊ ರಿಚಾರ್ಜ್ ಮಾಡಿಸಲು ಹೋಗಿದ್ದ ನಗರದ ನಿವಾಸಿಯೊಬ್ಬರು ₹ 2.80 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಬಗ್ಗೆ ಬಸವನಗುಡಿಯ 52 ವರ್ಷದ ವ್ಯಕ್ತಿ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಿಯೊ ಕಂಪನಿ ಪ್ರತಿನಿಧಿ ಸೋಗಿನಲ್ಲಿ ದೂರುದಾರರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಜಿಯೊ ಮೊಬೈಲ್ ಸಂಖ್ಯೆ ಸದ್ಯದಲ್ಲೇ ನಿಷ್ಕ್ರಿಯವಾಗಲಿದೆ. ಈಗಲೇ ದಾಖಲಾತಿಗಳನ್ನು ನೀಡಿ ಅಪ್‌ಡೇಟ್ ಮಾಡಿಕೊಳ್ಳಬೇಕು’ ಎಂದಿದ್ದ. ಲಿಂಕ್ ಸಹ ಕಳುಹಿಸಿದ್ದ.’

‘ಲಿಂಕ್ ತೆರೆದಿದ್ದ ದೂರುದಾರ, ಅದರಲ್ಲಿರುವ ಮಾಹಿತಿ ಭರ್ತಿ ಮಾಡಿದ್ದರು. ಡೆಬಿಟ್ ಕಾರ್ಡ್ ಮಾಹಿತಿಯನ್ನೂ ನಮೂದಿಸಿದ್ದರು. ಕೆಲ ನಿಮಿಷಗಳ ನಂತರ ದೂರುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 2.80 ಲಕ್ಷ ಡ್ರಾ ಆಗಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ದೂರುದಾರರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು