ಬುಧವಾರ, ಆಗಸ್ಟ್ 4, 2021
27 °C

ಹರೀಶ್‌ಗೌಡ ವಿರುದ್ಧ ಮಾನಹಾನಿ ವರದಿ: ಪತ್ರಕರ್ತನಿಗೆ ಜೈಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಎಎಸ್‌ ಅಧಿಕಾರಿಯಾಗಿದ್ದ ಬಿ.ಎ.ಹರೀಶ್‌ಗೌಡ ಅವರ ವಿರುದ್ಧ ಮಾನಹಾನಿಯಾಗುವಂಥ ವರದಿ ಬರೆದು ಪ್ರಕಟಿಸಿದ ‘ಪಾರಿವಾಳ’ ಪತ್ರಿಕೆಯ ಪತ್ರಕರ್ತ ರವಿಕುಮಾರ್‌ಗೆ ಇಲ್ಲಿನ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯ 9 ತಿಂಗಳ ಜೈಲು ಮತ್ತು ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ರವಿಕುಮಾರ್‌ 2000ನೇ ಇಸವಿಯಲ್ಲಿ ಹರೀಶ್‌ಗೌಡರ ವಿರುದ್ಧ ಮಾನಹಾನಿ ಆಗುವಂಥ ವರದಿ ಪ್ರಕಟಿಸಿದ್ದ ಆರೋಪಕ್ಕೆ ಒಳಗಾಗಿದ್ದರು. ವಿಚಾರಣೆ ನಡೆಸಿದ 66ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಕಾತ್ಯಾಯಿನಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.

2002ರಲ್ಲಿ ನಗರದ ಸಿಎಂಎಂ ಕೋರ್ಟ್‌ ರವಿಕುಮಾರ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2004ರಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಈ ತೀರ್ಪನ್ನು ಸಮರ್ಥಿಸಿತ್ತು. 2014ರಲ್ಲಿ ಹೈಕೋರ್ಟ್‌ ತಾಂತ್ರಿಕ ಕಾರಣದಿಂದ ತೀರ್ಪು ಬದಿಗೊತ್ತಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್‌ ಕಳುಹಿಸಿತ್ತು. 2017ರಲ್ಲಿ ವಿಚಾರಣಾ ಕೋರ್ಟ್‌ ಪತ್ರಕರ್ತನಿಗೆ ಆರು ತಿಂಗಳ ಜೈಲು ಶಿಕ್ಷೆ ನೀಡಿತ್ತು.

ತೀರ್ಪಿನ ವಿರುದ್ಧ ಆರೋಪಿ ಮತ್ತು ಪಿರ್ಯಾದಿ ಮೇಲ್ಮನವಿ ಸಲ್ಲಿಸಿದ್ದರು. 66ನೇ ಕೋರ್ಟ್‌ ಶಿಕ್ಷೆ ಪ್ರಮಾಣವನ್ನು ಮೂರು ತಿಂಗಳು ಹೆಚ್ಚಿಸಿ, ದಂಡ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು