ಬುಧವಾರ, ಡಿಸೆಂಬರ್ 2, 2020
25 °C

ದೀಪಾವಳಿಗೆ ಜೋಯಾಲುಕಾಸ್‌ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಮಾರಾಟ ಸಂಸ್ಥೆ ಜೋಯಾಲುಕಾಸ್‌ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ‌

ಗ್ರಾಹಕರು ಸಂಭ್ರಮದಿಂದ ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಖರೀದಿ ಮೇಲೆ ಬಂಗಾರದ ನಾಣ್ಯ, ನಗದು ವಾಪಸಾತಿ ಸೇರಿದಂತೆ ವಿವಿಧ ಕೊಡುಗೆಗಳನ್ನು ಸಂಸ್ಥೆ ಪ್ರಕಟಿಸಿದೆ. ವಿವಿಧ ಶ್ರೇಣಿಯ ಚಿನ್ನ, ವಜ್ರ, ಪ್ಲಾಟಿನಂ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸದ ಆಕರ್ಷಕ ಆಭರಣಗಳು ದೇಶದಾದ್ಯಂತ ಸಂಸ್ಥೆಯ ಎಲ್ಲ ಮಳಿಗೆಗಳಲ್ಲಿ ದೊರೆಯಲಿವೆ. 

₹ 50 ಸಾವಿರ ಮೌಲ್ಯದ ಡೈಮಂಡ್‌ ಮತ್ತು ಅನ್‌ಕಟ್ ಡೈಮಂಡ್‌ ಆಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಬಂಗಾರದ ಆಭರಣಗಳ ಖರೀದಿಗೆ 200 ಮಿ.ಗ್ರಾಂ ಚಿನ್ನದ ನಾಣ್ಯ ದೊರೆಯಲಿದೆ. ಈ ಕೊಡುಗೆ ಅ.27ರವರೆಗೆ ಮಾತ್ರ ಇರಲಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ದಾರರು ಹೆಚ್ಚುವರಿಯಾಗಿ ಶೇ 5ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಪ್ರತಿ ಕಾರ್ಡ್‌ಗೆ ₹ 2500 ವರೆಗೆ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ. 

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಅಲುಕಾಸ್, ‘ದೀಪಾವಳಿಯಲ್ಲಿ ಬಂಗಾರ ಖರೀದಿಯಿಂದ ಅದೃಷ್ಟ ಒಲಿದು ಬರಲಿದೆ ಎಂಬ ನಂಬಿಕೆಯಿದೆ. ನಮ್ಮ ಗ್ರಾಹಕರಿಗೆ ಉಚಿತವಾಗಿ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ನೀಡಲು ನಾವು ಈ ಅವಕಾಶವನ್ನು ಬಳಸಿಕೊಂಡಿದ್ದೇವೆ. ಈ ಕೊಡುಗೆ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.