ಗುರುವಾರ , ಜನವರಿ 21, 2021
30 °C

ಜೆಪಿಪಿ ಸಲ್ಲಿಕೆ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ (ಜೆಪಿಪಿ) ಸಲ್ಲಿಸುವ ಅವಧಿಯನ್ನು 2021ರ ಫೆ.28ರವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಮಿಕರ ಭವಿಷ್ಯದ ನಿಧಿ ಸಂಘಟನೆ (ಇಪಿಎಫ್‍ಒ) ತಿಳಿಸಿದೆ.

ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‍ಸಿ), ಬ್ಯಾಂಕುಗಳ ಪಿಂಚಣಿ ವಿತ ರಣಾ ಶಾಖೆಗಳು, ಅಂಚೆ ಕಚೇರಿಗಳು, ಅಂಚೆ ನೆಟ್‍ವರ್ಕ್, ಇಲಾಖೆಯಡಿ ಬರುವ ಗ್ರಾಮೀಣ ಡಾಕ್ ಸೇವಕರು ಸೇರಿದಂತೆ ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು.

ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು ಪತ್ತೆ ಹಚ್ಚಲು https://lacator.csccloud.in ಅನ್ನು ಬಳಸ ಬಹುದು. ತಮ್ಮ ಮನೆ ಅಥವಾ ಕಚೇರಿ ಗಳಿಂದ ಜೆಪಿಪಿ ಸಲ್ಲಿಸಲು http://ccc.cept.gov.in/covid/request.aspx ಅನ್ನು ಬಳಸಬಹುದು.

‘ನವೆಂಬರ್‌ನಲ್ಲಿ ಜೆಪಿಪಿ ಸಲ್ಲಿಸಲು ಸಾಧ್ಯವಾಗದ 35 ಲಕ್ಷ ಪಿಂಚಣಿದಾರರಿಗೆ ಈ ವಿಸ್ತರಿತ ಅವಧಿಯಲ್ಲಿ ಪಿಂಚಣಿ ನಿಲ್ಲಿಸುವುದಿಲ್ಲ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.