ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳಿಗೆ ನೆರವಾದ ಎನ್‌ಸಿಸಿ ಕೆಡೆಟ್‌ಗಳು

Last Updated 28 ಮಾರ್ಚ್ 2021, 18:29 IST
ಅಕ್ಷರ ಗಾತ್ರ

ಬೆಂಗಳೂರು: ಜ್ಯೋತಿ ನಿವಾಸ್ ಕಾಲೇಜಿನ ಎನ್.ಸಿ.ಸಿ ಕೆಡೆಟ್‌ಗಳು ಅಂಬೇಡ್ಕರ್ ನಗರ ಹಾಗೂ ಕೊಟ್ಟೂರಿನ ಕೊಳೆಗೇರಿ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಿಸಿದರು.

ಎನ್.ಸಿ.ಸಿ ಅಧಿಕಾರಿ ಕ್ಯಾ.ಎಚ್.ಕೆ.ರೂಪಾರಾಣಿ ನೇತೃತ್ವದಲ್ಲಿ 100 ಎನ್.ಸಿ.ಸಿ ಕೆಡೆಟ್‌ಗಳು6 ಕಿ.ಮೀ ದೂರ ರ‍್ಯಾಲಿಯಲ್ಲಿ ತೆರಳಿ ವಂಚಿತ ವರ್ಗದ 200 ಮಕ್ಕಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಿದರು. ಶಿಕ್ಷಣದ ಮಹತ್ವ, ಮಹಿಳಾ ಸಬಲೀಕರಣ, ಆರೋಗ್ಯ, ಸ್ವಚ್ಚತೆ, ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತುಕೊಳೆಗೇರಿ ನಿವಾಸಿಗಳಲ್ಲಿ ಅರಿವು ಮೂಡಿಸಿದರು.

‘ಬಡಜನರ ಸಮಸ್ಯೆಗಳಿಗೆ ಕಿವಿಯೊಡ್ಡಿ ಸಾಧ್ಯವಾದಷ್ಟು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಡವರಜೀವನ ಹಾಗೂ ಅವರ ಸಮಸ್ಯೆಗಳನ್ನು ಕೆಡೆಟ್‌ಗಳು ಅರಿತುಕೊಳ್ಳುವುದಕ್ಕೂ ಇದು ನೆರವಾಯಿತು’ ಎಂದು ಕ್ಯಾ. ಎಚ್.ಕೆ.ರೂಪಾರಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT