ಶುಕ್ರವಾರ, ಡಿಸೆಂಬರ್ 13, 2019
24 °C

ಐತಿಹಾಸಿಕ ಕಡಲೆಕಾಯಿ ಪರಿಷೆ ವಾಹನಗಳಿಗೆ ಪರ್ಯಾಯ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 23ರಿಂದ 26ರವರೆಗೆ ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರಯುಕ್ತ ಈ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಪರಿಷೆಗೆ ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ರಸ್ತೆ: ಲಾಲ್‌ಬಾಗ್‌ ವೆಸ್ಟ್‌ಗೇಟ್‌ನಿಂದ ವಾಣಿ ವಿಲಾಸ್‌ ರಸ್ತೆ ಮೂಲಕ ಮತ್ತು 5ನೇ ಮುಖ್ಯರಸ್ತೆ ಚಾಮರಾಜಪೇಟೆ ಹಾಗೂ ಗಾಂಧಿ ಬಜಾರ್‌ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಹಯವದನ ರಸ್ತೆ ಗವಿಪುರ 3ನೇ ಕ್ರಾಸ್‌ ಮೂಲಕ ಮೌಂಟ್‌ ಜಾಯ್‌ ರಸ್ತೆಯಾಗಿ ಹನುಮಂತ ನಗರಕ್ಕೆ ಹೋಗಬೇಕು. ಬುಲ್‌ ಟೆಂಪಲ್‌ ರಸ್ತೆಯ ಶೇಖರ್‌ ಜಂಕ್ಷನ್‌ನಲ್ಲಿ ಅಯ್ಯಂಗಾರ್‌ ರಸ್ತೆ ಮೂಲಕ ಗವಿಪುರ ಎಕ್ಸ್‌ಟೆನ್ಸನ್‌ 3ನೇ ಕ್ರಾಸ್‌ ರಸ್ತೆಯಿಂದ ಮೌಂಟ್‌ ಜಾಯ್‌ ರಸ್ತೆ ಮೂಲಕ ಹನುಮಂತನಗರಕ್ಕೆ ಹೋಗಬೇಕು.

ವಾಹನ ನಿಲುಗಡೆ: ನ್ಯಾಷನಲ್ ಕಾಲೇಜು ಆಟದ ಮೈದಾನ, ಎಪಿಎಸ್‌ ಕಾಲೇಜು ಮೈದಾನ, ಬುಲ್‌ ಟೆಂಪಲ್‌ ರಸ್ತೆ ಸಾಯಿರಂಗಾ ಆಟದ ಮೈದಾನಗಳಲ್ಲಿ ವಾಹನಗಳನ್ನು ನಿಲ್ಲಿಸಬಹುದು.

ಪ್ರತಿಕ್ರಿಯಿಸಿ (+)