ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ: ಕಳೆಗಟ್ಟಿದ ಶೇಂಗಾ ಜಾತ್ರೆ

ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಆಯೋಜನೆ: ಕಡಲೆಕಾಯಿ–ಬೆಲ್ಲ ಮಾರಾಟ ಜೋರು
Last Updated 16 ನವೆಂಬರ್ 2019, 22:36 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗ ಮಲ್ಲೇಶ್ವರದಲ್ಲಿ ಏರ್ಪಡಿಸಿರುವ ಕಡಲೆಕಾಯಿ ಪರಿಷೆಗೆ ಶನಿವಾರ ಚಾಲನೆ ನೀಡಲಾಯಿತು. ಪರಿಷೆ ಸೋಮವಾರದವರೆಗೆ ನಡೆಯಲಿದೆ. ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ವಿಭಿನ್ನ ತಳಿಗಳ ಕಡಲೆಕಾಯಿಗಳ ರಾಶಿಗಳ ಸಾಲು ಒಂದೆಡೆಯಾದರೆ, ಮತ್ತೊಂದೆಡೆ ಹಲವು ಬಗೆಯ ತಿಂಡಿ–ತಿನಿಸುಗಳ ಮಳಿಗೆಗಳಿವೆ. ದೇಗುಲದ ಸುತ್ತಲಿನ ರಸ್ತೆಗಳನ್ನು ಹೂವು–ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಗರ್ಭಗುಡಿ ಹಾಗೂ ಒಳಾಂಗಣವನ್ನೂ ಕಡಲೆಕಾಯಿಗಳಿಂದ ಅಲಂಕರಿಸಿರುವುದು ವಿಶೇಷ.

ಕಡಲೆಕಾಯಿ ಪರಿಷೆ ಜೊತೆಗೆ ಚಿತ್ರ ಪರಿಷೆಯನ್ನು ಆಯೋಜಿಸಲಾಗಿದೆ. ಹೊರ ರಾಜ್ಯದ ಶೇಂಗಾ:ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಭಾಗಗಳಿಂದಲೂ ಕಡಲೆಕಾಯಿ ಬಂದಿವೆ.

ಹಾಲ್ಗಡಲೆ, ಕೆಂಪುಕಡಲೆ ಸೇರಿದಂತೆ ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ ಮತ್ತು ಹೈಬ್ರಿಡ್ ತಳಿಗಳ ಕಾಯಿಗಳು ಬಂದಿವೆ. ಸೇರಿಗೆ ₹25 ಹಾಗೂ ₹30 ರಂತೆ ಮಾರಾಟ ಮಾಡಲಾಗುತ್ತಿದೆ. ಅಂದರೆ, ಕೆಜಿಗೆ ₹ 50ರಿಂದ ₹100 ದರ ನಿಗದಿಯಾಗಿದೆ.

ಮಂಗಳೂರಿನಿಂದ ಓಲೆ ಬೆಲ್ಲ (ತಾಟಿ ಬೆಲ್ಲ), ತಮಿಳುನಾಡಿನಿಂದ ಪೆಪ್ಪರ್ ಬೆಲ್ಲ, ತುಮಕೂರಿನಿಂದ ಸಾವಯವ ಬೆಲ್ಲ ಹೀಗೆ ನಾನಾ ಜಿಲ್ಲೆಯ ಬೆಲ್ಲಗಳು ಬಂದಿವೆ. ಬಳಗದ ಸದಸ್ಯ ನಾರಾಯಣ ಇವುಗಳನ್ನು ಸಂಗ್ರಹಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಪರಿಷೆಯಲ್ಲಿ ಬೆಲ್ಲದ ಮಳಿಗೆ ತೆರೆಯಲಾಗಿದೆ.

ಬಳೆ ವಿತರಣೆ:ದಾಂಡೇಲಿಯ ಉಳವಿ ಚನ್ನಬಸವೇಶ್ವರ ಮಠದಿಂದ ತರಿಸಲಾಗಿರುವ ಲಿಂಗ ಮತ್ತು ಬಸವನ ಅಚ್ಚುಳ್ಳ ಹಸಿರು ಗಾಜಿನ ಬಳೆಗಳು ಸೇರಿ 10 ಸಾವಿರ ಗಾಜಿನ ಬಳೆಗಳನ್ನುಪರಿಷೆ ಆಯೋಜಕರಾದ ಬಿ.ಕೆ.ಶಿವರಾಂ ತರಿಸಿದ್ದು, ಮಹಿಳೆಯರಿಗೆ ಉಚಿತವಾಗಿ ತಲಾ ಜೋಡಿಬಳೆ ನೀಡಲಾಗುತ್ತಿದೆ.

ಪರಿಷೆಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಚಂದ್ರಾ ಸಿ. ಅಶ್ವತ್ಥ್, ರುದ್ರಾಂಬ ಎಂ.ಪಿ. ಪ್ರಕಾಶ್, ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಹಾಜರಿದ್ದರು.

ದಶಮಾನೋತ್ಸವ ಸಂಭ್ರಮ
ಬಳಗವು ‘ಹುಣ್ಣಿಮೆ ಹಾಡು’ 125ನೇ ಕಾರ್ಯಕ್ರಮ (ದಶಮಾನೋತ್ಸವ)ದ ಅಂಗವಾಗಿ ಹಾಗೂ ಮೂರನೇ ವರ್ಷದ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪರಿಷೆಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಚಂದ್ರಾ ಸಿ. ಅಶ್ವತ್ಥ್, ರುದ್ರಾಂಬ ಎಂ.ಪಿ. ಪ್ರಕಾಶ್, ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಹಾಜರಿದ್ದರು.

700 ಮಳಿಗೆಗಳು
ಕಡಲೆಕಾಯಿ, ಆಟಿಕೆಗಳು, ತಿಂಡಿ ಮಳಿಗೆಗಳು ಸೇರಿ ಒಟ್ಟು 700 ಮಳಿಗೆಗಳನ್ನು ತೆರೆಯಲಾಗಿದೆ. ಸಂಜೆಯ ವೇಳೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಕರು ಆಯೋಜಿಸಿದ್ದಾರೆ.

ಬಳಗವು ‘ಹುಣ್ಣಿಮೆ ಹಾಡು’ 125ನೇ ಕಾರ್ಯಕ್ರಮ (ದಶಮಾನೋತ್ಸವ)ದ ಅಂಗವಾಗಿ ಹಾಗೂ ಮೂರನೇ ವರ್ಷದ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪರಿಷೆಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಚಂದ್ರಾ ಸಿ. ಅಶ್ವತ್ಥ್, ರುದ್ರಾಂಬ ಎಂ.ಪಿ. ಪ್ರಕಾಶ್, ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT