ಮಂಗಳವಾರ, ಏಪ್ರಿಲ್ 20, 2021
32 °C
ಹೈಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಅಫಿಡವಿಟ್ ಸಲ್ಲಿಕೆ

ಕಗ್ಗದಾಸಪುರ ಕೆರೆ ಒತ್ತುವರಿ ತೆರವು ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಗ್ಗದಾಸಪುರ ಕೆರೆ ಜಾಗದಲ್ಲಿ 23 ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ವಿವರ ಸಲ್ಲಿಸಿದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌, ಆದಷ್ಟು ತ್ವರಿತವಾಗಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಕಗ್ಗದಾಸಪುರ, ಬೇಗೂರು ಮತ್ತು ಸುಬ್ರಮಣ್ಯಪುರ ಕೆರೆಗಳಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳನ್ನು ದಾಖಲಿಸುವಂತೆ ಪೀಠ ನಿರ್ದೇಶನ ನೀಡಿತ್ತು.

‘ಕಗ್ಗದಾಸಪುರ ಕೆರೆಯ 47 ಎಕರೆ ಜಾಗದಲ್ಲಿ 3 ಎಕರೆ 18 ಗುಂಟೆ ಜಾಗ ಒತ್ತುವರಿಯಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಬೇಗೂರು ಕೆರೆಯ ಒಟ್ಟು 137 ಎಕರೆ 24 ಗುಂಟೆ ಜಾಗದಲ್ಲಿ 6 ಎಕರೆ 30 ಗುಂಟೆ ಅತಿಕ್ರಮಣವಾಗಿದೆ. 3 ಎಕರೆ 26 ‌ಗುಂಟೆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿದೆ. ಕೆರೆಯ ಬಫರ್ ವಲಯದಲ್ಲಿ ಮಣ್ಣು ಸುರಿಯಲಾಗಿದೆ’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

‘ಉತ್ತರಹಳ್ಳಿ ಗ್ರಾಮದ ಸುಬ್ರಮಣ್ಯಪುರ ಕೆರೆ ಒಟ್ಟು 25 ಎಕರೆ 6 ಗುಂಟೆ ವಿಸ್ತೀರ್ಣ ಹೊಂದಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೂ, ಕಂದಾಯ ಇಲಾಖೆ ದಾಖಲೆಗಳಲ್ಲಿ ಕೆರೆಯ ವಿಸ್ತೀರ್ಣ 18 ಎಕರೆ 6 ಗುಂಟೆ ಎಂದು ತೋರಿಸುತ್ತಿದೆ. ಹೊಸದಾಗಿ ಸರ್ವೆ ನಡೆಸಲು ನಾಲ್ಕು ವಾರಗಳ ಸಮಯವನ್ನು ತಹಶೀಲ್ದಾರ್ ಮತ್ತು ಸರ್ವೆ ಅಧಿಕಾರಿಗಳು ಕೇಳಿದ್ದಾರೆ’ ಎಂದು ವಿವರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು