ಬೆಂಗಳೂರು: ‘ಜ್ಯೋತ್ಸ್ನಾ ಕಾಮತ ಅವರು ಚರಿತ್ರೆಯ ಕಾಯಂ ವಿದ್ಯಾರ್ಥಿಯಾಗಿದ್ದರು’ ಎಂದು ಲೇಖಕಿ ನೇಮಿಚಂದ್ರ ಹೇಳಿದರು.

ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನದ ಶನಿವಾರ ಆಯೋಜಿಸಿದ್ದ ‘ಕೃಷ್ಣಾನಂದ ಕಾಮತ ಜ್ಯೋತ್ಸ್ನಾ ಕಾಮತ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಜ್ಯೋತ್ಸ್ನಾ ಅವರ ಅನುಭವ ಕಥನಗಳ ಬಗ್ಗೆ ಮಾತನಾಡಿದರು.

‘ಜ್ಯೋತ್ಸ್ನಾ ಅವರು ಕನ್ನಡ, ಇಂಗ್ಲಿಷ್, ಕೊಂಕಣಿ ಮೂರು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರು. ಅವರ ಅನುಭವ ಕಥನಗಳಲ್ಲಿ ವಿಸ್ಮೃತಿಗೆ ಸರಿದುಹೋಗಿರುವ ಹಲವಾರು ಘಟನೆಗಳನ್ನು, ದಿವಂಗತ ವ್ಯಕ್ತಿಗಳನ್ನು ಜೀವಂತವಾಗಿಸಿದ್ದಾರೆ’ ಎಂದು ಹೇಳಿದರು.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ‘ಕೃಷ್ಣಾನಂದ ಕಾಮತ ಅವರು ಮೂಲತಃ ಕೀಟ ವಿಜ್ಞಾನ ಪರಿಸರದಲ್ಲಿ ಅಗಾಧವಾದ ಪ್ರೀತಿ, ಆಸಕ್ತಿ ಹೊಂದಿದ್ದರು. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಕೃಷ್ಣಾನಂದ ಅವರ ಲೇಖನಗಳು ಇರುತ್ತಿದ್ದವು. ಒಬ್ಬ ಲೇಖಕನಿಗೆ ಇರುವ ಜವಾಬ್ದಾರಿ ಏನು ಎಂಬುದನ್ನು ಕೃಷ್ಣಾನಂದ ಅವರ ವಿಚಾರಗಳಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದು’ ಎಂದರು.

ಸಂಶೋಧಕ ಶೇಷಶಾಸ್ತ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಜಯಂತ ಕಾಯ್ಕಿಣಿ ಅವರು ಕಾಮತ ದಂಪತಿಗಳ ವ್ಯಕ್ತಿತ್ವ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬಗ್ಗೆ ಮಾತನಾಡಿದರೆ, ಕೃಷ್ಣಾನಂದ ಕಾಮತ ಅವರ ಪರಿಸರ ಮತ್ತು ವೈಜ್ಞಾನಿಕ ಸಾಹಿತ್ಯದ ಬಗ್ಗೆ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಅವರು ಮಾತನಾಡಿದರು.

ವಿಕಾಸ ಕಾಮತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.