ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಇದೇ 13 ಮತ್ತು 14ರಂದು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಾಧಕಿ–ಮಹಿಳಾ ಚಿಂತನಾ ಸಮಾವೇಶ ಹಮ್ಮಿಕೊಂಡಿದೆ.

ಕರ್ನಾಟಕ ಲೇಖಕಿಯರ ಸಂಘದ ಸಹಯೋಗವಿದೆ. ಸಾಹಿತ್ಯ ವಲಯದಲ್ಲಿ ಅವಜ್ಞೆಗೊಳಗಾದ ಮಧ್ಯಕಾಲೀನ ಯುಗದ ವಚನಕಾರ್ತಿಯರು, ಕೀರ್ತನಕಾರ್ತಿಯರು ಮತ್ತು ತತ್ವಪದಕಾರ್ತಿಯರನ್ನು ಕೇಂದ್ರೀಕರಿಸಿ ಗೋಷ್ಠಿಗಳನ್ನು ರೂಪಿಸಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.

‘200ಕ್ಕೂ ಹೆಚ್ಚು ಚಿಂತಕಿಯರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ವಚನಕಾರ್ತಿಯರಲ್ಲಿ ಲಿಂಗತ್ವ ಪರಿಕಲ್ಪನೆ ಮತ್ತು ಕಾಯಕ ತತ್ವ, ತತ್ವ ಪದಕಾರ್ತಿಯರಲ್ಲಿ ಸ್ತ್ರೀ-ಪುರುಷ ಪರಿಕಲ್ಪನೆ ಸೇರಿ ವಿವಿಧ ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.