ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೆಗೂ ಕನ್ನಡ ಧ್ವಜ, ಸಿಹಿ ತಿನಿಸು

ಸಂಭ್ರಮ, ಸಡಗರಗಳೊಂದಿಗೆ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ
Last Updated 31 ಅಕ್ಟೋಬರ್ 2022, 22:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಪೂರ್ಣ ಸಂಭ್ರಮ ಸಡಗರಗಳಿಂದ ಆಚರಿಸಲು ಸೋಮವಾರವಿಡೀ ಭರದ ಸಿದ್ಧತೆಗಳನ್ನು ನಡೆಸಲಾಯಿತು.

ಕ್ಷೇತ್ರದ ಪ್ರತಿ ಮನೆಗೂ ಹಳದಿ-ಕೆಂಪು ಬಣ್ಣಗಳ ಕನ್ನಡ ಧ್ವಜವನ್ನು ಹಾಗೂ ಸಿಹಿ ತಿನಿಸುಗಳನ್ನು ಬಿಜೆಪಿ ಕಾರ್ಯಕರ್ತರು ವಿತರಿಸಿದರು. ರಾಜ್ಯೋತ್ಸವದ ದಿನ ಬೆಳಿಗ್ಗೆ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್ ಚಳವಳಿ ಉದ್ಯಾನದಲ್ಲಿ ಕನ್ನಡ ಧ್ವಜಾರೋಹಣವನ್ನು ಸಚಿವಡಾ. ಸಿ ಎನ್. ಅಶ್ವತ್ಥ
ನಾರಾಯಣ ನೆರವೇರಿಸಲಿದ್ದಾರೆ. ಗಾಯತ್ರೀನಗರ ಮತ್ತು ಸುಬ್ರಹ್ಮಣ್ಯ ನಗರಗಳಲ್ಲಿ ಡಾ.ರಾಜಕುಮಾರ್ ಉದ್ಯಾನ ಮುಂತಾದ ಕಡೆಗಳಲ್ಲಿ ಕನ್ನಡ ಧ್ವಜ ಹಾರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT