ಮಂಗಳವಾರ, ನವೆಂಬರ್ 12, 2019
27 °C

ಧ್ವಜಾರೋಹಣ ಕಡ್ಡಾಯವಾಗಲಿ: ಮೇಯರ್‌ ಎಂ.ಗೌತಮ್ ಕುಮಾರ್‌ ಅಭಿಮತ

Published:
Updated:
Prajavani

ಬೆಂಗಳೂರು: ‘ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ನಡೆಯಬೇಕು’ ಎಂದು ಮೇಯರ್‌ ಎಂ.ಗೌತಮ್ ಕುಮಾರ್‌ ಆಶಯ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ನಾಡ ವೈಭವ ಸಾರುವ ಕನ್ನಡ ಸಂಸ್ಕೃತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ, ಮನವಿ ಪತ್ರ ಸಲ್ಲಿಸಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೂ ಮನವಿ ಸಲ್ಲಿಸಲಾಗುವುದು’ ಎಂದರು.

ಇಂದಿನಿಂದ ಕನ್ನಡ ಫಲಕ ಕಡ್ಡಾಯ: ‘ಮೊದಲೇ ಹೇಳಿದಂತೆ ಇಂದಿನಿಂದ ಕನ್ನಡ ಫಲಕ ಹಾಕುವುದು ಕಡ್ಡಾಯ. ಕನ್ನಡ ಫಲಕ ಅಳವಡಿಸಿದವರಿಗೆ ಮಾತ್ರ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು. ಈ ನಿಯಮ ಯಶಸ್ವಿಯಾಗಲು ಕನ್ನಡಪರ ಸಂಘಟನೆಗಳ ಸಹಕಾರ ಬೇಕು. ಅಂಗಡಿ, ಮಳಿಗೆಗಳಿಗೆ ಕನ್ನಡ ಫಲಕ ಅಳವಡಿಸುವಂತೆ ಸಂಘಟನೆಗಳು ವ್ಯಾಪಾರಿಗಳಿಗೆ ಮನವರಿಕೆ ಮಾಡಬೇಕು’ ಎಂದು ಗೌತಮ್‌ ಕುಮಾರ್‌ ತಿಳಿಸಿದರು.

‘ಇಂದಿನಿಂದ ಕನ್ನಡ ಫಲಕ ಕಡ್ಡಾಯ’
‘ಮೊದಲೇ ಹೇಳಿದಂತೆ ಇಂದಿನಿಂದ ಕನ್ನಡ ಫಲಕ ಹಾಕುವುದು ಕಡ್ಡಾಯ. ಕನ್ನಡ ಫಲಕ ಅಳವಡಿಸಿದವರಿಗೆ ಮಾತ್ರ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು. ಈ ನಿಯಮ ಯಶಸ್ವಿಯಾಗಲು ಕನ್ನಡಪರ ಸಂಘಟನೆಗಳ ಸಹಕಾರ ಬೇಕು. ಅಂಗಡಿ ಮಳಿಗೆಗಳಿಗೆ ಕನ್ನಡ ಫಲಕ ಅಳವಡಿಸುವಂತೆ ಸಂಘಟನೆಗಳು ವ್ಯಾಪಾರಿಗಳಿಗೆ ಮನವರಿಕೆ ಮಾಡಬೇಕು’ ಎಂದು ಗೌತಮ್‌ ಕುಮಾರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)