ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ರಾಜ್ಯಾಧ್ಯಕ್ಷ ಸ್ಥಾನಕ್ಕೆ 22 ಮಂದಿ ಸ್ಪರ್ಧೆ

Last Updated 8 ಏಪ್ರಿಲ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಟ್ಟು 22 ಮಂದಿ ಸ್ಪರ್ಧಿಸಿದ್ದು, ಎಲ್ಲರ ನಾಮಪತ್ರವೂ ಸ್ವೀಕೃತಗೊಂಡಿವೆ.

ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಯಲಿದೆ. ಏ.7ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರ ನೇತೃತ್ವದಲ್ಲಿ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿರುವ ಎಲ್ಲ 22 ಅಭ್ಯರ್ಥಿಗಳ ನಾಮಪತ್ರವೂ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಅಂಗೀಕರಿಸಿದ್ದಾರೆ.

ವ.ಚ. ಚನ್ನೇಗೌಡ, ಮಹೇಶ್ ಜೋಶಿ, ಸಂಗಮೇಶ ಬಾದವಾಡಗಿ, ಸಿ.ಕೆ. ರಾಮೇಗೌಡ, ರಾಜಶೇಖರ ಮುಲಾಲಿ, ಬಸವರಾಜ ಶಿ. ಹಳ್ಳೂರ, ಬಾಡದ ಬದ್ರಿನಾಥ್, ಶಿವರಾಜ ಪಾಟೀಲ, ಮ.ಚಿ. ಕೃಷ್ಣ, ಸರಸ್ವತಿ ಶಿವಪ್ಪ ಚಿಮ್ಮಲಗಿ, ವೈ. ರೇಣುಕಾ, ಶೇಖರಗೌಡ ಮಾಲಿ ಪಾಟೀಲ, ಕೆ. ರತ್ನಾಕರ ಶೆಟ್ಟಿ, ವಾಲ್ಮೀಕಿ ಉರ್ಫ್, ಮಾಯಣ್ಣ, ಪ್ರಮೋದ್ ಹಳಕಟ್ಟಿ, ಶಿವಪ್ಪ ಮಲ್ಲಪ್ಪ ಬಾಗಲ, ಕೆ. ರವಿ ಅಂಬೇಕರ, ಕೆ.ಎಂ. ರೇವಣ್ಣ, ನ.ಶ್ರೀ. ಸುಧೀಂದ್ರರಾವ್, ಶರಣಬಸಪ್ಪ ಕಲ್ಲಪ್ಪ ದಾನಕೈ ಹಾಗೂ ಶಿವರುದ್ರಸ್ವಾಮಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಕೇರಳ ಗಡಿನಾಡ ಘಟಕಕ್ಕೆ ಸುಬ್ರಮಣ್ಯ ವಿ. ಭಟ್, ರಾಧಾಕೃಷ್ಣ, ಆಂಧ್ರ ಪ್ರದೇಶ ಗಡಿನಾಡ ಘಟಕಕ್ಕೆ ಕುಣೆ ಬಾಲರಾಜ್, ಎಚ್‌.ಬಿ. ಶಿವಕುಮಾರ್, ಅಂಜನ್ ಕುಮಾರ್, ಶಶಿಧರ್, ತಿಪ್ಪೇಸ್ವಾಮಿ ಜಿ.ಎಸ್., ಹನುಮಂತರಾಯ ಜಿ.ಕೆ., ಎಸ್‌.ಕೆ. ಜಯಶಂಕರ್, ಮಹಾರಾಷ್ಟ್ರ ಗಡಿನಾಡ ಘಟಕಕ್ಕೆ ಎಸ್‌.ಎಸ್. ಸಾಲೀಮಠ, ಸೋಮಶೇಖರ ಜಮಶೆಟ್ಟಿ, ಮಲ್ಲಿಕಾಜೆಪ್ಪ ಸೋಮಶೇಖರ ಮಡ್ಡೆ ಹಾಗೂ ತಮಿಳುನಾಡು ಘಟಕಕ್ಕೆ ಮಧು ಸಿ.ಸಿ., ತಮಿಳ್ ಸೆಲ್ವಿ, ಬಿ.ಎಸ್. ವಿನಯ್ ಅವರು ನಾಮಪತ್ರ ಸಲ್ಲಿಸಿದ್ದರು.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಗಡಿನಾಡು ಘಟಕ ಕಸಾಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳ ಪರಿಶೀಲನೆ ಪ್ರಗತಿ ಹಂತದಲ್ಲಿದ್ದು, ಶುಕ್ರವಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಗೋವಾ ಗಡಿನಾಡ ಘಟಕಕ್ಕೆ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ವಿಶೇಷ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಏ.12ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ಇರಲಿದೆ. ಬಳಿಕ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT