ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ ಸ್ಪರ್ಧೆ: ‘ಅಪ್ಪ’ ಕವನಕ್ಕೆ ಮೊದಲ ಬಹುಮಾನ

Last Updated 16 ಮಾರ್ಚ್ 2021, 22:07 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದು, ಮೊದಲನೇ ಬಹುಮಾನಕ್ಕೆ ಧಾರವಾಡದ ತುಪ್ಪದ ಕುರಹಟ್ಟಿಯ ಕವಿತಾ ಪಾಟೀಲ್ ಅವರ ‘ಅಪ್ಪ’ ಕವನ ಆಯ್ಕೆಯಾಗಿದೆ

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ಜನ್ಮದಿನದ ಅಂಗವಾಗಿ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಬಹುಮಾನ ₹ 2,000 ನಗದು ಒಳಗೊಂಡಿದೆ. ಎರಡನೇ ಬಹುಮಾನಕ್ಕೆ ಬೆಂಗಳೂರಿನ ಜಯನಗರದ ಡಾ. ಶೈಲೇಶ್ ಕುಮಾರ್ ಅವರ ‘ಬಸವ ಲೈವ್’ ಕವನ (₹ 1,500 ನಗದು ಬಹುಮಾನ), ಮೂರನೇ ಬಹುಮಾನಕ್ಕೆ ಬೆಂಗಳೂರಿನ ರಾಜರಾಜೇಶ್ವರಿನಗರದ ಸುದರ್ಶನ್ ಎಚ್.ಪಿ. ಅವರ ‘ನನ್ನಮ್ಮ’ ಕವನ (₹ 1,000 ನಗದು ಬಹುಮಾನ) ಭಾಜನವಾಗಿದೆ.

ಮೆಚ್ಚುಗೆ ಬಹುಮಾನಕ್ಕೆ ಚಾಮರಾಜನಗರದ ವೆಂಕಟೇಶ್ ಬಾಬು ಅವರ ‘ಅನ್ನದಾತನ ಬದುಕು ಅತಂತ್ರ’ ಕವನ, ಬೆಂಗಳೂರಿನ ಶ್ರೀರಾಮಪುರದ ಗೌಡಗೆರೆ ಮಾಯಶ್ರೀ ಅವರ ‘ಓ ಮಳೆಯೇ’ ಕವನ ಹಾಗೂ ಕಲಬುರ್ಗಿಯ ಚಿತ್ತಾಪುರದ ಸರೋಜಾದೇವಿ ಆರ್‌.ಎನ್. ಅವರ ‘ಬದುಕಂಗಳ ದೀಪ’ ಕವನ ಆಯ್ಕೆಯಾಗಿದೆ. ಈ ಬಹುಮಾನವು ತಲಾ ₹ 500 ನಗದು ಹೊಂದಿದೆ. ವಿಶೇಷ ಬಹುಮಾನಕ್ಕೆ ಬೆಂಗಳೂರಿನ ಕೆಂಗೇರಿಯ ಗಿ. ಚನ್ನಬಸವಸ್ವಾಮಿ ಅವರ ‘ಗೋವಿಂದ ಪೈ ನೆನಪು’ ಕವನ ಮತ್ತು ಮೈಸೂರಿನ ನಂಜನಗೂಡಿನ ಎಸ್.ಎಲ್. ವರಲಕ್ಷ್ಮಿ ಮಂಜುನಾಥ್ ಅವರ ‘ಕನ್ನಡಾಂಬೆ’ ಕವನ ಭಾಜನವಾಗಿದೆ. ಈ ಬಹುಮಾನ ತಲಾ ₹ 250 ಒಳಗೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಕೋ.ವೆಂ. ರಾಮಕೃಷ್ಣೇಗೌಡ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT