6

‘ಜನಮನ ಗೆದ್ದ ರಾಜಕಾರಣಿ’

Published:
Updated:
ಎಂಜಿಆರ್ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ನಟಿ ಸಾಹುಕಾರ್ ಜಾನಕಿ, ಎಚ್.ಡಿ.ದೇವೇಗೌಡ, ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣರಾಜ್ ಇದ್ದಾರೆ - ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಟರಾಗಿ ಅಷ್ಟೇ ಅಲ್ಲ, ಎಂ.ಜಿ. ರಾಮರಾವ್‌ ಅವರು ಜನಮನ ಗೆದ್ದ ರಾಜಕಾರಣಿ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ ದೇವೇಗೌಡ ಹೇಳಿದರು.

ಕರ್ನಾಟಕ ಅಣ್ಣಾ ಡಿ.ಎಂ.ಕೆ ಸಂಘವು ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಕೆ.ಆರ್‌. ಕೃಷ್ಣರಾಜು ಅವರ ‘ಭಾರತ ರತ್ನ ಡಾ.ಎಂಜಿಆರ್‌’ ಮತ್ತು ‘ಅಮ್ಮನ ಸಾಧನೆಯ ಕ್ರಾಂತಿ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ದಕ್ಷಿಣ ಭಾರತದ ಘನತೆಯನ್ನು ಸಾರಿದ ಎಂಜಿಆರ್‌ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ರಾಜ್ಯದ ನೀರಾವರಿ ಹಂಚಿಕೆ ವಿಷಯದಲ್ಲಿ ಚರ್ಚಿಸಲು ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೆ. ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ’ ಎಂದು ನೆನಪಿಸಿಕೊಂಡರು.

ಹಿರಿಯ ನಟಿ ಸಾಹುಕಾರ್‌ ಜಾನಕಿ, ‘ಸಿನಿಮಾ ಬೇರೆ, ನಿಜ ಜೀವನ ಬೇರೆ. ಆದರೆ, ಎಂಜಿಆರ್‌ ದೊಡ್ಡ ಮಾನವತಾ
ವಾದಿ. ಅವರೊಂದಿಗೆ ಕೆಲಸ ಮಾಡಿದ ನಾವೇ ಅದೃಷ್ಟವಂತರು’ ಎಂದರು.

ಎಂಜಿಆರ್‌ ವೇಷಭೂಷಣ ಸ್ಪರ್ಧೆಯಲ್ಲಿ 101 ಮಕ್ಕಳು ಭಾಗವಹಿಸಿದ್ದರು. ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !