‘ಚುಂಬನದಲ್ಲಿ ಎಲ್ಲ ಅನುಭವಿಗಳೇ ಬಿಡಿ’

7
ವಿಧಾನಸಭೆಯಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಸ್ಯ ಚಟಾಕಿ

‘ಚುಂಬನದಲ್ಲಿ ಎಲ್ಲ ಅನುಭವಿಗಳೇ ಬಿಡಿ’

Published:
Updated:

ಬೆಂಗಳೂರು: ‘ಚುಂಬನದಲ್ಲಿ ನಾವೆಲ್ಲ ಅನುಭವಿಗಳೇ ಬಿಡಿ. ಆ ವಿಷಯದ ಬಗ್ಗೆ ಚರ್ಚೆ ಬೇಡ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.

ವಿಧಾನಸಭೆಯಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ, ‘ಕಲಾಪದ ಬಗ್ಗೆ ನಮಗೆ ಜೂನ್‌ 30ರಂದು ನೋಟಿಸ್‌ ಬಂದಿದೆ. ನಿಯಮಾವಳಿಗಳ ಪ್ರಕಾರ 15 ದಿನಗಳ ಮೊದಲೇ ಮಾಹಿತಿ ನೀಡಬೇಕು. ಆಗ ನಮಗೆ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುತ್ತದೆ’ ಎಂದರು.

ರಮೇಶ್‌ ಕುಮಾರ್‌, ‘ಈಗಷ್ಟೇ ಅಧಿವೇಶನ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಲೋಪ ಆಗುವುದಿಲ್ಲ’ ಎಂದು ಭರವಸೆ ನೀಡಿದರು. ಮಾಧುಸ್ವಾಮಿ, ‘ಈ ಹಿಂದೆ ಎರಡು ಅಧಿವೇಶನಗಳು ನಡೆದಿವೆ. ಪರಿಸ್ಥಿತಿ ಸುಧಾರಣೆ ಆಗಿಲ್ಲ. ಮೊದಲ ಚುಂಬನಂ ದಂತಭಗ್ನಂ’ ಎಂದರು. ಆಗ ರಮೇಶ್‌ ಕುಮಾರ್‌ ಚಟಾಕಿ ಹಾರಿಸಿದರು.

ಮೊದಲು ಸ್ವರ್ಗಕ್ಕೆ ಹೋಗಲಿ: ಅಗಲಿದ ಸದಸ್ಯರಿಗೆ ಸಂತಾಪ ಸೂಚಿಸಿ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಅವರು ಮುನಿರತ್ನ ಹಾಗೂ ಬೈರತಿ ಬಸವರಾಜ್ ಜತೆಗೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ವಿಧಾನಸಭಾಧ್ಯಕ್ಷರು, ‘ಹೆಬ್ಬಾರ್‌ ಸುಮ್ಮನಿರಿ, ಸ್ವರ್ಗಕ್ಕೆ ಹೋಗುವವರು ಮೊದಲು ಹೋಗಲಿ. ನೀವು ಅಡ್ಡಿ ಉಂಟು ಮಾಡಬೇಡಿ. ಬಳಿಕ ಮಾತನಾಡಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !