ಬೆಂಗಳೂರು ಮಾತ್ರವಲ್ಲದೇ ಇತರೆಡೆ ಹೆಚ್ಚಿರುವ ಬೀದಿ ನಾಯಿಗಳ ಸಮಸ್ಯೆ ನಿವಾರಿಸಲು ರಾಜ್ಯದಲ್ಲಿ ಎರಡು ಕಡೆ ʻಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರʼಗಳು ಸ್ಥಾಪನೆಯಾಗಲಿವೆ.

ಇದರಡಿ ಬೆಂಗಳೂರು ಹಾಗೂ ಬೀದರ್ ಪಶು ಮಹವಿದ್ಯಾಲಯದ ಪಶುವೈದ್ಯರು ಮತ್ತು ಪಶುವೈದ್ಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ. ಇದರಿಂದ ರಾಜ್ಯದಲ್ಲಿ ವೈಜ್ಞಾನಿಕ ಹಾಗೂ ಪರಿಣಾಮಕಾರಿ ಸಂತಾನಹರಣ ನಿಯಂತ್ರಣ ಜಾರಿಗೆ ಸಹಕಾರಿಯಾಗಲಿದೆ.

ಇದಲ್ಲದೇ ಪಶುಗಳ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಹಾಗೂ ಬೀದರ್ ಪಶುವೈದ್ಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರು ಸಿ.ಟಿ.ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ವನ್ಯಜೀವಿ ಸಂಘರ್ಷ ತಡೆಗೆ ₹ 1,500 ಕೋಟಿ: ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳ ಗ್ರಾಮಾಂತರ ಪ್ರದೇಶದಲ್ಲಿ ಮಾನವ–ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆ ಪ್ರಕಟಿಸಲಾಗಿದೆ.

ಮುಂದಿನ ಐದು ವರ್ಷದಲ್ಲಿ ₹ 1,500 ಕೋಟಿ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹269 ಕೋಟಿ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.