ಬೆಂಗಳೂರು: ರಾಜ್ಯದಲ್ಲಿ 48 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯಗಳಿಗೆ ಈ ಬಾರಿಯ ಬಜೆಟ್ನಲ್ಲಿ ಕೇವಲ ₹93.5 ಕೋಟಿ ಒದಗಿಸಲಾಗಿದೆ ಎಂದು ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (ಡಿಎಪಿಸಿ) ಅಸಮಾಧಾನ ವ್ಯಕ್ತಪಡಿಸಿದೆ.

ಮಹಾಸಭಾದ ಆರ್ಚ್ ಬಿಷಪ್ ವಿನೋದ್ ಎಂ. ಚಾಕೊ, ಸಹಾಯಕ ಆರ್ಚ್ ಬಿಷಪ್ ಸುನೀಲ್ ವಿ. ಜೇಕಬ್, ಸಿನೋಡ್ ಕಾರ್ಯದರ್ಶಿ ಬಿಷಪ್ ವೆನಿಯಲ್ ಮೋಸಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮ (ಕೆಸಿಸಿಡಿಸಿಎಲ್) ಆರಂಭಿಸಿರುವುದು ಉತ್ತಮ ಹೆಜ್ಜೆ. ಆದರೆ, ಕೆಸಿಸಿಡಿಸಿಎಲ್ಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ’ ಎಂದು ಹೇಳಿದರು.

2025–26ರ ಕರ್ನಾಟಕ ಬಜೆಟ್ನಲ್ಲಿ ಕೆಸಿಸಿಡಿಸಿಎಲ್ಗೆ ₹ 250 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ, ₹ 85 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಉಳಿದಿರುವ ₹165 ಕೋಟಿಯನ್ನು ಈ ಹಣಕಾಸು ವರ್ಷದೊಳಗೆ ಬಿಡುಗಡೆ ಮಾಡಬೇಕು. ಎಸ್ಸಿಎಸ್ಪಿ, ಟಿಎಸ್ಪಿ ಮಾದರಿಯಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರದಲ್ಲಿ ಕ್ರೈಸ್ತ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿದ್ಯಾರ್ಥಿ ಹಾಗೂ ಉದ್ಯೋಗಿ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಕ್ರೈಸ್ತರ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಂರಕ್ಷಿಸಲು ಸಂಗ್ರಹಾಲಯ ಸ್ಥಾಪಿಸಬೇಕು. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕ್ರೈಸ್ತ ಅಧ್ಯಯನ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಬೇಕು. ಕ್ರೈಸ್ತ ಯುವಕರಿಗಾಗಿ ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ತಂತ್ರಜ್ಞಾನಗಳು ಮತ್ತು ಇತರ ಆಧುನಿಕ ಕ್ಷೇತ್ರಗಳಲ್ಲಿ ಕೌಶಲಾಭಿವೃದ್ಧಿ ಹಾಗೂ ಮರುಕೌಶಲ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಕೆಸಿಸಿಡಿಸಿಎಲ್ನಲ್ಲಿ ಪ್ರೊಟೆಸ್ಟಂಟರಿಗೂ ಪ್ರಾತಿನಿಧ್ಯ ನೀಡಬೇಕು. ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಕ್ರೈಸ್ತ ಸಮುದಾಯ ಭವನಗಳನ್ನು ನಿರ್ಮಿಸಬೇಕು. ಪ್ರವರ್ಗ 2ಸಿ ರಚಿಸಿ ಕ್ರೈಸ್ತರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಚರ್ಚ್ಗಳು, ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಮಾಡುವುದನ್ನು ತಡೆಯಬೇಕು ಎಂದರು.

ಕ್ರೈಸ್ತ ಧಾರ್ಮಿಕ ಸಂಸ್ಥೆಗಳು ಮತ್ತು ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ಗೂ ಸರ್ಕಾರದಿಂದ ವಾರ್ಷಿಕ ಅನುದಾನ ನೀಡಬೇಕು. ಹಜ್ ಯಾತ್ರಿಕರಿಗೆ ನೀಡುವಂತೆ ಯೆರೂಸಲೇಮ್ಗೆ ತೆರಳುವ ಕ್ರೈಸ್ತ ಯಾತ್ರಿಕರಿಗೂ ಆರ್ಥಿಕ ನೆರವು ನೀಡಬೇಕು. ಕ್ರೈಸ್ತ ಪಾಸ್ಟರ್ಗಳು ಮತ್ತು ರೆವರೆಂಡ್ಗಳಿಗೆ ಮಾಸಿಕ ಗೌರವಧನ ನೀಡಬೇಕು. ಪಾಸ್ಟರ್ಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.